ಲೈಂಗಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಈಗ್ಲೂ ನಮ್ಮಲ್ಲಿ ನಿಷೇಧಿತ ವಿಷ್ಯ. ಸೆಕ್ಸ್ ಬಗ್ಗೆ ಅನೇಕ ನಂಬಿಕೆಗಳಿವೆ. ಸೆಕ್ಸ್ ಬಗ್ಗೆ ಜ್ಞಾನವಿಲ್ಲದ ಹಾಗೂ ಅನುಭವವಿಲ್ಲದ ಅನೇಕರು ಈಗ್ಲೂ ಆ ನಂಬಿಕೆಗಳನ್ನು ನಂಬುತ್ತಾರೆ.
ಸೆಕ್ಸ್ ಎಂದ್ರೆ ಪುರುಷ ಹಾಗೂ ಮಹಿಳೆ ಇಬ್ಬರೂ ವಿವಸ್ತ್ರವಾಗಿ ಮಲಗುವುದು, ತಬ್ಬಿಕೊಳ್ಳುವುದು ಎಂದು ಅನೇಕರು ತಿಳಿದುಕೊಂಡಿದ್ದಾರೆ. ಪುರುಷ ಕಿಸ್ ಕೊಟ್ಟರೆ ಮಕ್ಕಳಾಗುತ್ತವೆ ಎಂದುಕೊಳ್ಳುವವರ ಸಂಖ್ಯೆ ಈಗ್ಲೂ ಇದೆ. ಈ ಬಗ್ಗೆ ಸರಿಯಾದ ಶಿಕ್ಷಣ ಸಿಗದಿರುವುದೇ ಈ ತಪ್ಪು ಕಲ್ಪನೆಗೆ ಕಾರಣ.
ಸುರಕ್ಷಿತ ಸೆಕ್ಸ್ ಗೆ ಎರಡೆರಡು ಕಾಂಡೋಮ್ ಬಳಕೆ ಒಳ್ಳೆಯದು ಎಂದು ನಂಬುವವರಿದ್ದಾರೆ. ಎರಡು ಕಾಂಡೋಮ್ ಒಟ್ಟಿಗೆ ಬಳಕೆ ಮಾಡುವುದ್ರಿಂದ ಮಹಿಳೆಯರು ಗರ್ಭ ಧರಿಸುವುದಿಲ್ಲ ಎಂದುಕೊಳ್ಳುವವರಿದ್ದಾರೆ. ಆದ್ರೆ ಎರಡು ಕಾಂಡೋಮ್ ಒಟ್ಟಿಗೆ ಬಳಸಿದ್ರೆ ಎರಡರ ನಡುವೆ ತಿಕ್ಕಾಟವಾಗಿ ಒಡೆಯುವ ಸಾಧ್ಯತೆ ಹೆಚ್ಚು ಎಂಬ ಸತ್ಯ ಗೊತ್ತಿರಲಿ.
ಹಸ್ತಮೈಥುನದ ಬಗ್ಗೆಯೂ ಅನೇಕರಿಗೆ ತಿಳಿದಿರುವುದಿಲ್ಲ. ಕೆಲವರು ಪುರುಷರು ಮಾತ್ರ ಹಸ್ತಮೈಥುನ ಮಾಡಿಕೊಳ್ತಾರೆಂದು ನಂಬಿರ್ತಾರೆ. ಆದ್ರೆ ಅದು ತಪ್ಪು. ಮಹಿಳೆಯರು ಕೂಡ ಹಸ್ತಮೈಥುನ ಮಾಡಿಕೊಳ್ತಾರೆ.
ಮೊದಲ ಸೆಕ್ಸ್ ವೇಳೆ ಮಹಿಳೆಯರಿಗೆ ನೋವು ಹೆಚ್ಚು. ರಕ್ತಸ್ರಾವ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ. ಕೆಲವರು ಸ್ನೇಹಿತರಿಂದ ಈ ಬಗ್ಗೆ ತಿಳಿದುಕೊಂಡಿರುತ್ತಾರೆ. ಆದ್ರೆ ಎಲ್ಲ ಮಹಿಳೆಯರಲ್ಲೂ ಹೀಗೆ ಆಗುವುದಿಲ್ಲ ಎಂಬುದು ಗೊತ್ತಿರದೆ ವಿನಃ ಕಾರಣ ಮೊದಲ ರಾತ್ರಿ ಭಯಗೊಳ್ತಾರೆ.
ಮಕ್ಕಳಿಗೆ ಮಕ್ಕಳ ಬಗ್ಗೆಯೂ ದೊಡ್ಡವರು ತಪ್ಪು ಮಾಹಿತಿ ನೀಡ್ತಾರೆ. ಮಕ್ಕಳು ದೇವರ ವರ. ಮದುವೆಯಾದ ಮಹಿಳೆಯರಿಗೆ ದೇವರು ಮಕ್ಕಳನ್ನು ನೀಡ್ತಾನೆ ಎಂದು ದೊಡ್ಡವರು ಹೇಳುವುದ್ರಿಂದ ಮಕ್ಕಳು ಇದನ್ನೇ ಸತ್ಯವೆಂದು ನಂಬಿರ್ತಾರೆ.