ಟೀನೇಜ್ ಮುಗೀತು ಅಂದ್ರೆ ಹದಿಹರೆಯ ಕೂಡ ಮರೆಯಾಯ್ತು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆದ್ರೆ 20ರ ನಂತರವೂ ಹರೆಯ ಇರುತ್ತದೆ ಎನ್ನುತ್ತಾರೆ ಸಂಶೋಧಕರು. ಹದಿಹರೆಯ ಅನ್ನೋದು ಬಾಲ್ಯಾವಸ್ಥೆ ಮತ್ತು ಪ್ರೌಢಾವಸ್ಥೆಯ ನಡುವಿನ ಸಮಯ.
10 ವರ್ಷದಿಂದ ಆರಂಭವಾಗಿ 19ರವರೆಗೂ ಹರೆಯ ಇರುತ್ತದೆ ಅಂತಾ ಹೇಳಲಾಗುತ್ತಿತ್ತು. ಆದ್ರೆ ಹದಿಹರೆಯ 10 ರಿಂದ 24 ವರ್ಷದವರೆಗೂ ಇರುತ್ತದೆ ಅಂತಾ ವಿಜ್ಞಾನಿಗಳು ಹೇಳ್ತಿದ್ದಾರೆ. ಈಗ 21 ವರ್ಷಕ್ಕೆಲ್ಲಾ ವಿದ್ಯಾಭ್ಯಾಸ ಮುಗಿಯುವುದಿಲ್ಲ.
ಸಾಮಾನ್ಯವಾಗಿ ಎಲ್ಲರೂ ಉನ್ನತ ಶಿಕ್ಷಣ ಪಡೆಯುತ್ತಾರೆ. ಇದರಿಂದ ಮದುವೆ ತಡವಾಗುತ್ತದೆ. ಮಕ್ಕಳನ್ನು ಹೊಂದುವುದು ಕೂಡ ವಿಳಂಬವಾಗುತ್ತದೆ. ಹಾಗಾಗಿ ಪ್ರೌಢಾವಸ್ಥೆ ಶುರುವಾಗುವುದು 24ರ ನಂತರ ಅನ್ನೋದು ವಿಜ್ಞಾನಿಗಳ ಸಂಶೋಧನೆಯಲ್ಲಿ ದೃಢಪಟ್ಟಿದೆ.
1980ರ ದಶಕದಲ್ಲಿ ಪುರುಷರು 23 ವರ್ಷಕ್ಕೆ, ಮಹಿಳೆಯರು 22 ವರ್ಷಕ್ಕೆ ಮದುವೆಯಾಗುತ್ತಿದ್ದರು. ಆದ್ರೀಗ ಟ್ರೆಂಡ್ ಬದಲಾಗಿದೆ. ಪುರುಷರು 29ಕ್ಕೆ ಮದುವೆಯಾದ್ರೆ, ಮಹಿಳೆಯರು 27 ವರ್ಷಗಳ ನಂತರ ಹೊಸ ಬಾಳಿಗೆ ಅಡಿಯಿಡುತ್ತಿದ್ದಾರೆ. 20 ವರ್ಷವಾಗುವವರೆಗೆ ಬಹುತೇಕರಿಗೆ ವಿಸ್ಡಮ್ ಟೀತ್ ಬಂದಿರುವುದಿಲ್ಲ. ಹಾಗಾಗಿ ಪ್ರೌಢಾವಸ್ಥೆ ಶುರುವಾಗುವುದು 24 ವರ್ಷಗಳ ಬಳಿಕ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ ವಿಜ್ಞಾನಿಗಳು.