ಮಾನವರಂತೆಯೇ ಮಾನತಾಡಬಲ್ಲ ರೋಬೊಟ್ ಒಂದನ್ನು ಅಭಿವೃದ್ಧಿಪಡಿಸಿರುವ ಐಐಟಿ ಪ್ರಾಂಶುಪಾಲ ದಿನೇಶ್ ಪಟೇಲ್ ಸುದ್ದಿಯಲ್ಲಿದ್ದಾರೆ.
’ಶಾಲು’ ಹೆಸರಿನ ಈ ರೋಬೊಟ್ ಅನ್ನು ಹ್ಯೂಮನಾಯ್ಡ್ ರೋಬೊಟ್ ’ಸೋಫಿಯಾ’ದ ತದ್ರೂಪಿನಂತೆ ರಚಿಸಲಾಗಿದೆ. ಈ ರೋಬೊಟ್‌ಅನ್ನು ಬಳಸಿ ಬಿಸಾಡಲಾದ ಪ್ಲಾಸ್ಟಿಕ್, ಅಲ್ಯೂಮಿನಿಯಮ್, ಕಾರ್ಡ್‌ಬೋರ್ಡ್‌ನಂಥ ತ್ಯಾಜ್ಯಗಳಿಂದ ರಚಿಸಲಾಗಿದೆ.
“ಶಾಲು ಜನರನ್ನು ಗುರುತಿಸಬಲ್ಲಳಾಗಿದ್ದು, ಭಾವನೆಗಳನ್ನು ವ್ಯಕ್ತಪಡಿಸಬಲ್ಲಳು. ಸುದ್ದಿ ಪತ್ರಿಕೆ ಓದುವುದಲ್ಲದೇ, ರೆಸಿಪಿಗಳನ್ನು ಓದುವುದರ ಜೊತೆಗೆ ಇತರ ಚಟುವಟಿಕೆಗಳನ್ನು ಮಾಡಬಲ್ಲಳು. ಶಾಲೆಗಳಲ್ಲಿ ಈಕೆಯನ್ನು ಶಿಕ್ಷಕಿಯನ್ನಾಗಿಯೋ ಇಲ್ಲ ಕಚೇರಿಗಳಲ್ಲಿ ರಿಸೆಪ್ಷನಿಸ್ಟ್ ಆಗಿಯೋ ಶಾಲುಳನ್ನು ನೇಮಿಸಿಕೊಳ್ಳಬಹುದು,” ಎನ್ನುತ್ತಾರೆ ದಿನೇಶ್.
ದೇಶದ ಗಮನಸೆಳೆದಿದ್ದ ಬಾಟ್ಲಾ ಹೌಸ್ ಎನ್ ಕೌಂಟರ್ ಅಪರಾಧಿಗೆ ಮರಣದಂಡನೆ
ಶಾಲುಗೆ ಒಟ್ಟಾರೆ 47 ಭಾಷೆಗಳು ಗೊತ್ತಿದ್ದು, ಇವುಗಳಲ್ಲಿ 38 ವಿದೇಶೀ ಭಾಷೆಗಳು ಹಾಗೂ 9 ಸ್ಥಳೀಯ ಡೈಯಲೆಕ್ಟ್‌ಗಳಾಗಿವೆ. ಕಳೆದೊಂದು ವರ್ಷದಿಂದ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುವ ದಿನೇಶ್, ಶಾಲು ಏನೆಲ್ಲಾ ಮಾಡಬಲ್ಲಳು ಎಂದು ತೋರುತ್ತಲೇ ಬಂದಿದ್ದಾರೆ.
ಶಾಲು ವಿವಿಧ ಭಾಷೆಗಳಲ್ಲಿ ಮಾತನಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.