ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ತಾಯಿಯ ವಯಸ್ಸನ್ನೂ ಆಧರಿಸಿರುತ್ತದೆ ಎಂಬುದನ್ನು ಇತ್ತೀಚಿನ ಅಧ್ಯಯನವೊಂದು ದೃಢಪಡಿಸಿದೆ.
ಹದಿಹರೆಯದ ಹೆಣ್ಣುಮಕ್ಕಳಿಗೆ ಜನಿಸುವ ಮಕ್ಕಳು ವಯಸ್ಕರಿಗೆ ಹುಟ್ಟುವ ಮಕ್ಕಳಿಗಿಂತ ಹೆಚ್ಚು ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಾರೆ ಎಂಬುದನ್ನು ಸಂಶೋಧನೆಗಳು ಹೇಳಿವೆ. ಇದಕ್ಕೆ ಹಲವು ಸಾಮಾಜಿಕ, ಜೈವಿಕ ಅಂಶಗಳು ಕಾರಣವಾಗುತ್ತವೆ ಎಂದೂ ಅದು ಹೇಳಿದೆ.
ಭಾರತದಲ್ಲಿ 18 ವರ್ಷದೊಳಗೆ ಮದುವೆ ಮಾಡುವುದು ಅಕ್ರಮ ಎಂಬ ಕಾನೂನಿದ್ದರೂ ಸಮೀಕ್ಷೆಯ ಪ್ರಕಾರ ಶೇ.27ರಷ್ಟು ಮಕ್ಕಳಿಗೆ ಅದರೊಳಗೆ ಮದುವೆ ಮಾಡಲಾಗುತ್ತಿದೆ.
ಈ ತಕ್ಷಣ ಜನಿಸಿದ ಮಕ್ಕಳಲ್ಲಿ ಬೆಳವಣಿಗೆ ಕುಂಠಿತ, ತೂಕದ ಸಮಸ್ಯೆ ಅಧಿಕವಾಗಿರುತ್ತದೆ. ಈ ಪರಿಣಾಮ ಬದುಕಿನುದ್ದಕ್ಕೂ ಅವರನ್ನು ಕಾಡುತ್ತದೆ ಎಂದಿದೆ ಈ ಅಧ್ಯಯನ. ಹಾಗಾಗಿ ಇಪ್ಪತ್ತರ ಗಡಿ ದಾಟಿದ ಬಳಿಕವೇ ಮದುವೆಗೆ ಸಿದ್ದವಾಗುವ ಮನಸ್ಥಿತಿ ಜನರಲ್ಲಿ ಮೂಡುವುದು ಸದ್ಯದ ಅತ್ಯಗತ್ಯಗಳಲ್ಲಿ ಒಂದು.