ಬೇಸಿಗೆಯ ಬಿಸಿಗೆ ದೇಹವನ್ನು ತಂಪಾಗಿಡಲು ನಾವೆಲ್ಲ ಹಣ್ಣುಗಳ ಮೊರೆ ಹೋಗುತ್ತೇವೆ. ದುಬಾರಿ ಹಣವನ್ನು ತೆತ್ತಾದರೂ ಹಣ್ಣು ತಂದು ಮನೆಮಂದಿಯೆಲ್ಲ ಅದರಲ್ಲೂ ಮಕ್ಕಳಿಗೆ ತಿನ್ನಲು ಕೊಡುತ್ತೇವೆ. ಆದರೆ ಗುಣಮಟ್ಟದ ಬಗ್ಗೆ ಆಲೋಚಿಸುವುದೇ ಇಲ್ಲ.
ಅಂಗಡಿಯಿಂದ ತಂದ ಯಾವುದೇ ಹಣ್ಣನ್ನಾದರೂ ತೊಳೆಯದೆ ಸೇವಿಸದಿರಿ. ಆಪಲ್ ಆಗಿದ್ದರೆ ಸಿಪ್ಪೆ ತೆಗೆದು ಸೇವಿಸಿ. ಸಿಪ್ಪೆಯಲ್ಲಿ ಪೌಷ್ಟಿಕಾಂಶಗಳು ಇವೆ ಎಂಬುದೇನೋ ನಿಜ ಆದರೆ ಅದಕ್ಕೆ ಹಾಕಿದ ಸ್ಪ್ರೇಗಳು ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.
ಬಾಳೆಹಣ್ಣು ಕೊಳ್ಳುವಾಗ ಉದ್ದನೆಯ, ದುಂಡನೆಯ, ಹಳದಿ ಬಣ್ಣದ ಹಣ್ಣೆಂದು ಮಾರು ಹೋಗದಿರಿ. ಅದಕ್ಕೆ ಹಾಗೆ ಬೆಳೆಯಲು ಇಂಜೆಕ್ಷನ್ ನೀಡಿರುತ್ತಾರೆ. ಸಾಧಾರಣ ಗಾತ್ರದ ಬಾಳೆ ಹಣ್ಣನ್ನೇ ಖರೀದಿಸಿ.
ಮಾವಿನ ಸೀಸನ್ ಬಾರದೆ ಹಣ್ಣು ಖರೀದಿಸಲು ಮುಗಿಬೀಳಬೇಡಿ. ಬೇಗ ಹೂ ಬಿಡಲು, ಕಾಯಿಯಾಗಲು, ಹಣ್ಣಾಗಲು ರಾಸಾಯನಿಕ ಸಿಂಪಡಿಸಿರುತ್ತಾರೆ. ಹೀಗಾಗಿ ಮಾವಿನ ಹಣ್ಣನ್ನು ಸೀಸನ್ ನಲ್ಲಿ ಮಾತ್ರ ಖರೀದಿಸಿ.