ದಿನಕ್ಕೆ 6ರಿಂದ 8 ಗಂಟೆ ನಿದ್ದೆ ಬಹಳ ಒಳ್ಳೆಯದು ಎಂಬುದೇನೋ ನಿಜ. ಆದರೆ ನಿದ್ದೆಯ ಸಮಯ ರಾತ್ರಿಯೇ ಆಗಿದ್ದರೆ ಬಹಳ ಒಳ್ಳೆಯದು. ಹಗಲಲ್ಲಿ ನಿದ್ದೆ ಮಾಡುವುದರಿಂದ ಸಮಸ್ಯೆಗಳೇ ಹೆಚ್ಚು ಎನ್ನುತ್ತದೆ ವೈದ್ಯಕೀಯ ಲೋಕ.
ಆಯುರ್ವೇದದ ಪ್ರಕಾರ ಹಗಲಿನಲ್ಲಿ ನಿದ್ದೆ ಮಾಡಿದರೆ ಶೀತ, ಕೆಮ್ಮು ಹೆಚ್ಚುವ ಸಂದರ್ಭ ಜಾಸ್ತಿ. ಶ್ವಾಸ ಸಂಬಂಧಿ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.
ರಾತ್ರಿ ನಿದ್ರಿಸುವಾಗ ಈ ವಿಷಯದ ಬಗ್ಗೆ ಇರಲಿ ಎಚ್ಚರ…!
ರಾತ್ರಿ ನಿದ್ದೆ ಮಾಡುವುದರಿಂದ ದೇಹಕ್ಕೆ ಆರಾಮ ಸಿಗುತ್ತದೆ, ಶರೀರದ ಸುಸ್ತು ಮಾಯವಾಗಿ ಹೊಸ ಶಕ್ತಿ ನಿಮ್ಮನ್ನು ಆವರಿಸುತ್ತದೆ. ದಿನವಿಡೀ ಉಲ್ಲಾಸದಿಂದ ಕೆಲಸ ಮಾಡಲು ಪ್ರೇರೇಪಣೆ ಸಿಗುತ್ತದೆ. ಅದೇ ಹಗಲು ನಿದ್ದೆ ಮಾಡಿದರೆ ನಿಮ್ಮ ಮೂಡ್ ಹಾಳಾಗುತ್ತದೆ. ಮಧ್ಯಾಹ್ನ ಮಲಗಿ ಎದ್ದರೆ ಸಂಜೆ ಹಾಗೂ ರಾತ್ರಿ ಕೆಲಸ ಮಾಡುವ ಮೂಡ್ ಹೋಗಿಬಿಡುತ್ತದೆ.
ಹಗಲಿನ ನಿದ್ದೆ ನಿಮ್ಮನ್ನು ಆಲಸ್ಯದ ಗೂಡಿಗೆ ತಳ್ಳುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೆ ನಿಮ್ಮ ಆರೋಗ್ಯದ ಕೀಲಿಕೈ ನಿಮ್ಮಲ್ಲೇ ಉಳಿಯುತ್ತದೆ. ಹಾಗಾಗಿ ಹಗಲಿನ ನಿದ್ದೆ ದೂರ ಮಾಡಿ, ರಾತ್ರಿ ಹಾಯಾಗಿ ಮಲಗಿ.