ಮನೆಯಂಗಳದಲ್ಲಿ ಕೆಲವು ಗಿಡಗಳನ್ನು ನೆಡುವುದರಿಂದ ಮನೆಯೊಳಗೆ ಅಥವಾ ಆಸುಪಾಸಿನಲ್ಲಿ ಕೀಟಗಳು ಸುಳಿಯದಂತೆ ಮಾಡಬಹುದು.
ಗೊಂಡೆ ಹೂವಿನ ಗಿಡವನ್ನು ಮನೆಯ ಅಂಗಳದಲ್ಲಿ ನೆಟ್ಟುನೋಡಿ. ಇದರ ಹೂವು ಸುವಾಸನೆ ಬೀರುವುದಿಲ್ಲ. ಇದು ಸೊಳ್ಳೆ ಮತ್ತು ಚಿಕ್ಕ ಹೇನಿನ ಜಾತಿಯ ಕೀಟಗಳನ್ನು ದೂರ ಮಾಡುತ್ತವೆ.
ಲೆಮನ್ ಗ್ರಾಸ್ ಗೆ ಸೊಳ್ಳೆಗಳನ್ನು ಹೊಡೆದೋಡಿಸುವ ಗುಣವಿದೆ. ಇದನ್ನು ನಿಮ್ಮ ಮನೆಯಂಗಳದಲ್ಲಿ ಬೆಳೆಸಿ, ಇದರ ಗಾಳಿ ಸೇವನೆ ದೇಹಾರೋಗ್ಯಕ್ಕೂ ಒಳ್ಳೆಯದು. ಅಸ್ತಮಾ ರೋಗಿಗಳಿಗೆ ಉಸಿರಾಟದ ತೊಂದರೆ ಇರುವವರಿಗೆ ಇದು ನೆರವಾಗುತ್ತದೆ.
ಪುದೀನಾ ಕೇವಲ ಅಡುಗೆ ಮನೆಗೆ ಸೀಮಿತವಲ್ಲ. ಈ ಸೊಪ್ಪಿನ ವಾಸನೆಗೆ ಸೊಳ್ಳೆ ಅಥವಾ ಹಲವು ಸಣ್ಣ ಕ್ರಿಮಿಕೀಟಗಳು ಹತ್ತಿರ ಸುಳಿಯುವುದಿಲ್ಲ. ಹೀಗಾಗಿ ನಿಮ್ಮ ಕೈ ತೋಟದಲ್ಲಿ ಇದಕ್ಕೂ ಜಾಗವಿರಲಿ.