ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಖೆಯದು. ಡಯೆಟ್ ಮಾಡುವವರಿಂದ ಹಿಡಿದು ವರ್ಕೌಟ್ ಮಾಡುವವರಿಗೂ ಇದು ಬೇಕು. ಇದರ ಬಿಳಿ ಭಾಗ , ಹಳದಿ ಭಾಗ ಎರಡೂ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಇಷ್ಟೆಲ್ಲಾ ಒಳ್ಳೆದಿರುವ ಮೊಟ್ಟೆ ಎಂದರೆ ಕೆಲವರು ಮೂಗು ಮುರಿಯುತ್ತಾರೆ ಇದಕ್ಕೆ ಕಾರಣ ಬೇಯಿಸಿದ ಮೊಟ್ಟೆ ಸಿಪ್ಪೆ ತೆಗೆಯುವ ರಗಳೆ ಕೆಲಸಕ್ಕೆ.
ಮೊಟ್ಟೆಯನ್ನು ಎಷ್ಟೇ ಚೆನ್ನಾಗಿ ಬೇಯಿಸಿದರೂ ಕೆಲವೊಮ್ಮೆ ಇದರ ಸಿಪ್ಪೆ ತೆಗೆಯುವುದಕ್ಕೆ ಆಗದೇ ಕಿರಿಕಿರಿ ಆಗುವುದಂಟು. ಸಿಪ್ಪೆ ತೆಗೆಯುವಾಗ ಇದರ ಒಳಗಿರುವ ಬಿಳಿಭಾಗ ಕೂಡ ಅರ್ಧಕರ್ಧ ಬಂದುಬಿಟ್ಟು ಮೊಟ್ಟೆಯೇ ವೇಸ್ಟ್ ಆಗಿ ಬಿಡುತ್ತದೆ. ಸುಲಭವಾಗಿ ಇದರ ಸಿಪ್ಪೆ ತೆಗೆಯುವ ಟ್ರಿಕ್ಸ್ ಇಲ್ಲಿದೆ.
ಒಂದು ಲೋಟಕ್ಕೆ ಸ್ವಲ್ಪ ನೀರು ಹಾಕಿಕೊಂಡು ಅದಕ್ಕೆ ಬೇಯಿಸಿದ ಮೊಟ್ಟೆಯನ್ನು ಹಾಕಿ. ಗ್ಲಾಸ್ ತುಂಬಾ ನೀರು ಹಾಕಬೇಡಿ. ಆಮೇಲೆ ಲೋಟದ ಬಾಯಿಯನ್ನು ನಿಮ್ಮ ಅಂಗೈಯಿಂದ ಮುಚ್ಚಿ ಚೆನ್ನಾಗಿ ಗ್ಲಾಸ್ ಅನ್ನು ಮೇಲೆ ಕೆಳಗೆ ಅಲ್ಲಾಡಿಸಿ. ಆಗ ಮೊಟ್ಟೆಯ ಸಿಪ್ಪೆ ಸುಲಭದಲ್ಲಿ ಬಿಟ್ಟುಕೊಳ್ಳುತ್ತದೆ