alex Certify ಸಾಕು ಪ್ರಾಣಿಗಳ ದೇಹದಿಂದ ವಾಸನೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕು ಪ್ರಾಣಿಗಳ ದೇಹದಿಂದ ವಾಸನೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಹೀಗೆ ಮಾಡಿ

ಕೆಲವರು ಮನೆಯಲ್ಲಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕನ್ನು ಸಾಕುತ್ತಾರೆ. ಈ ಸಾಕು ಪ್ರಾಣಿಗಳನ್ನು ಎಷ್ಟೆ ಕ್ಲೀನ್ ಮಾಡಿದರೂ ಕೂಡ ಕೆಲವೊಮ್ಮೆ ಅವುಗಳ ದೇಹದಿಂದ ವಾಸನೆ ಬರುತ್ತದೆ. ಹಾಗಾಗಿ ಈ ವಾಸನೆಯನ್ನು ನಿವಾರಿಸಲು ಈ ವಿಧಾನ ಅನುಸರಿಸಿ.

*ಸಾಕು ಪ್ರಾಣಿಗಳ ದೇಹದಿಂದ ವಾಸನೆ ಬರುತ್ತಿದ್ದರೆ ಲ್ಯಾವೆಂಡರ್ ಆಯಿಲ್ ಅನ್ನು ಬಳಸಿ. ಸಾಕು ಪ್ರಾಣಿಗಳನ್ನು ಸ್ನಾನ ಮಾಡಿಸುವ ವೇಳೆ ನೀರಿಗೆ 2 ಹನಿ ಲ್ಯಾವೆಂಡರ್ ಆಯಿಲ್ ಅನ್ನು ಹಾಕಿ ಸ್ನಾನ ಮಾಡಿಸಿ. ಇಲ್ಲವಾದರೆ ಪ್ರಾಣಿಗಳ ಮೈಮೇಲೆ ಲ್ಯಾವೆಂಡರ್ ಆಯಿಲ್ ಮಿಶ್ರಿತ ನೀರನ್ನು ಸಿಂಪಡಿಸಿ.

ಕಿಡ್ನಿಗೆ ಅಪಾಯ ತರುವ 10 ‘ಸಂಗತಿ’ಗಳು

*ಸಾಕು ಪ್ರಾಣಿಗಳ ಮೈಮೇಲಿನ ವಾಸನೆಯನ್ನು ನಿವಾರಿಸಲು ವಿನೆಗರ್ ಬಳಸಿ. 2 ಚಮಚ ವಿನೆಗರ್ ಮತ್ತು ಅಡುಗೆ ಸೋಡಾವನ್ನು ಮಿಕ್ಸ್ ಮಾಡಿ ಪ್ರಾಣಿಗಳ ಮೈಮೇಲೆ ಸಿಂಪಡಿಸಿ.

*ಪ್ರಾಣಿಗಳು ಮೂತ್ರ ವಿಸರ್ಜನೆ ಮಾಡಿದ ಬಟ್ಟೆಗಳ ವಾಸನೆಯನ್ನು ನಿವಾರಿಸಲು ಅಡುಗೆ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಮಿಕ್ಸ್ ಮಾಡಿ ಬಟ್ಟೆಗಳ ಮೇಲೆ ಸಿಂಪಡಿಸಿ. ಸ್ವಲ್ಪ ಸಮಯದ ಬಳಿಕ ನೀರಿನಿಂದ ವಾಶ್ ಮಾಡಿ. ಇದರಿಂದ ಕೂಡ ವಾಸನೆ ನಿವಾರಣೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...