ಪುರುಷ ಹಾಗೂ ಮಹಿಳೆ ಇಬ್ಬರಿಗೂ ಸಂಭೋಗ ಅತಿ ಮುಖ್ಯ. ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರು ಸಂಭೋಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎನ್ನಲಾಗುತ್ತದೆ. ಅದು ಏನೇ ಇರಲಿ, ಸಂಭೋಗ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಲಾಭದಾಯಕ. ಪ್ರತಿದಿನ ಸೆಕ್ಸ್ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಸೆಕ್ಸ್ ವೇಳೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕ್ಯಾಲರಿ ಬರ್ನ್ ಆಗುತ್ತದೆ. ಇದು ಬೊಜ್ಜು ಕಡಿಮೆ ಮಾಡಲು ನೆರವಾಗುತ್ತದೆ.
ಸೆಕ್ಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದ್ರಿಂದ ಮಹಿಳೆಯರ ದೇಹ ಯಾವುದೇ ರೋಗದ ವಿರುದ್ಧ ಹೋರಾಡಲು ಶಕ್ತಿ ಪಡೆಯುತ್ತದೆ.
ಪುರುಷರಿಗಿಂತ ಹೆಚ್ಚು ಒತ್ತಡಕ್ಕೊಳಗಾಗುವವರು ಮಹಿಳೆಯರು. ಸಂಭೋಗ ಮಹಿಳೆಯರ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ.
ಸಂಭೋಗದ ವೇಳೆ ರಕ್ತಪರಿಚಲನೆ ಸುಲಭವಾಗುತ್ತದೆ. ಇದು ಹೃದಯ ಸಂಬಂಧಿ ಖಾಯಿಲೆ ಕಾಡದಂತೆ ರಕ್ಷಣೆ ನೀಡುತ್ತದೆ. ನಿಯಮಿತವಾಗಿ ಸೆಕ್ಸ್ ಮಾಡುವ ಮಹಿಳೆಯರಲ್ಲಿ ಸ್ವಾಭಿಮಾನ ಹೆಚ್ಚಿರುತ್ತದೆ. ಕ್ಯಾನ್ಸರ್ ಸೇರಿದಂತೆ ಅಪಾಯಕಾರಿ ರೋಗಗಳು ಕಾಡುವ ಸಾಧ್ಯತೆ ಕಡಿಮೆಯಿರುತ್ತದೆ.