ದೀರ್ಘಾವಧಿಯ ಸಂಬಂಧದ ನಂತ್ರ ಕೆಲವರು ಬೇರೊಬ್ಬರತ್ತ ಆಕರ್ಷಿತರಾಗುವುದು ಸಹಜ. ಹಾಗಂತ ಎಲ್ಲರೂ ಇನ್ನೊಂದು ಸಂಬಂಧ ಬೆಳೆಸ್ತಾರೆ ಎಂದಲ್ಲ. ಇದು ಸಂಬಂಧದ ಆಳ ಹಾಗೂ ವ್ಯಕ್ತಿ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವಿವಾಹೇತರ ಸಂಬಂಧ ಹೆಚ್ಚಾಗಿದೆಯಂತೆ.
ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಗ್ಲೀಡೆನ್ ಇತ್ತೀಚೆಗೆ ಸಮೀಕ್ಷೆಯೊಂದನ್ನು ನಡೆಸಿತ್ತು. ಭಾರತದ ದೊಡ್ಡ ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಪಾಲುದಾರರು ಯಾಕೆ ಸಂಗಾತಿಗೆ ಮೋಸ ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆದಿದೆ. ಇದ್ರಲ್ಲಿ ಬಂದ ಫಲಿತಾಂಶ ಆಘಾತಕಾರಿಯಾಗಿದೆ.
ಮೂರು ತಿಂಗಳಲ್ಲಿ ಸಂಗಾತಿಗೆ ಮೋಸ ಮಾಡುವುದ್ರಲ್ಲಿ ದೆಹಲಿ ಜನರು ಮುಂದಿದ್ದಾರೆ. ದೆಹಲಿ ಶೇಕಡಾ 30.5 ಮಂದಿ ಇದ್ರಲ್ಲಿ ಪಾಲು ಪಡೆದಿದ್ದಾರೆ. ಚೆನ್ನೈ ಜನರ ಪಾಲು ಇದ್ರಲ್ಲಿ ಶೇಕಡಾ 25ರಷ್ಟಿದೆ. ಬೆಂಗಳೂರು ಹಾಗೂ ಮುಂಬೈನ ಶೇಕಡಾ 23.4 ಮಂದಿ ಮೂರು ತಿಂಗಳಲ್ಲಿ ಸಂಗಾತಿಗೆ ಮೋಸ ಮಾಡ್ತಾರೆ.
ಐದು ವರ್ಷದ ಸಂಬಂಧದ ನಂತ್ರ ಸಂಗಾತಿಗೆ ಮೋಸ ಮಾಡುವವರ ಸಂಖ್ಯೆ ಕಡಿಮೆಯಿದೆ. ಇದ್ರಲ್ಲಿ ಚೆನ್ನೈ ಜನರು ಮುಂದಿದ್ದಾರೆ. ಐದು ವರ್ಷಕ್ಕಿಂತ ಹೆಚ್ಚು ಸಮಯ ಸಂಗಾತಿ ಜೊತೆಗಿರುವ ದಂಪತಿ ಮೋಸ ಮಾಡುವುದು ಬಹಳ ಕಡಿಮೆ. ಇದ್ರಲ್ಲಿ ಮುಂಬೈ ಮುಂದಿದೆ. ಫ್ಲರ್ಟಿಂಗ್ ಕೂಡ ಮೋಸದ ಸಾಲಿನಲ್ಲಿ ಸೇರಿಸಲಾಗಿತ್ತು. ಇದ್ರಲ್ಲಿ ದೆಹಲಿ ಜನ ಮುಂದಿದ್ದರೆ ಬೆಂಗಳೂರಿಗರು ಎರಡನೇ ಸ್ಥಾನದಲ್ಲಿದ್ದಾರೆ.
ಅನೇಕರು ಸಂಗಾತಿಗೆ ಮೋಸ ಮಾಡಿದ ನಂತ್ರ ಪಶ್ಚಾತಾಪ ಪಟ್ಟಿದ್ದಾರೆ. ಇದ್ರಲ್ಲಿ ದೆಹಲಿಯವರು ಮುಂದಿದ್ದಾರೆ. ನಂತ್ರ ಬೆಂಗಳೂರು ಹಾಗೂ ಹೈದ್ರಾಬಾದ್ ಸ್ಥಾನ ಪಡೆದಿದೆ.