
ಶಾಪಿಂಗ್ ಮಾಡುವುದೆಂದರೆ ಎಲ್ಲರಿಗೂ ಇಷ್ಟವೇ. ಆದರೆ ಶಾಪಿಂಗ್ ಗೆ ಹೋಗುವ ಮುನ್ನ ಈ ಕೆಲವು ಸಂಗತಿಗಳನ್ನು ನೆನಪಿಟ್ಟುಕೊಳ್ಳಿ.
ತುಂಬಿದ ಬಜಾರ್ ಗಳಲ್ಲಿ ನುಗ್ಗುವ, ಕಿರಿಕಿರಿ ಮಾಡುವ ಅಥವಾ ಚರ್ಚಿಸುತ್ತಾ ನಿಲ್ಲುವುದು ಶಾಪಿಂಗ್ ನ ಲಕ್ಷಣವಲ್ಲ. ಹಾಗಾಗಿ ಕ್ಯೂನಲ್ಲಿ ಸರಿಯಾಗಿ ನಿಲ್ಲುವುದನ್ನು ಕಲಿಯಿರಿ. ಇದು ಸಾಧ್ಯವಿಲ್ಲ ಎಂದಾದರೆ ರಜಾ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ಶಾಪಿಂಗ್ ಹೋಗಿ. ಆಗ ಜನಸಂದಣಿ ತುಸು ಕಡಿಮೆ ಇರುತ್ತದೆ.
ಸಂತೋಷದ ಗುಟ್ಟು ಎಲ್ಲಿದೆ ಗೊತ್ತಾ…..?
ಶಾಪಿಂಗ್ ಮಾಡುವಾಗ ಎಲ್ಲವೂ ಅಂದವಾಗಿ ಕಾಣುತ್ತದೆ. ಮನೆಗೆ ತಂದ ಬಳಿಕ ಇದು ಅನವಶ್ಯಕ ಎಂಬ ಭಾವನೆ ಬರುತ್ತದೆ. ಇದನ್ನು ತಪ್ಪಿಸಲು ನಿಮಗೆ ಬೇಕಾದ ವಸ್ತುಗಳ ಪಟ್ಟಿ ತಯಾರಿಸಿಯೇ ಮನೆಯಿಂದ ಹೊರಹೋಗಿ.
ಕಾರ್ಡ್ ಅಥವಾ ಪರ್ಸ್ ಕೊಂಡೊಯ್ಯುವುದನ್ನು ಮರೆಯದಿರಿ. ಆದಷ್ಟು ಡಿಸ್ಕೌಂಟ್ ಇರುವ ದಿನಗಳಲ್ಲೇ ವಸ್ತುಗಳನ್ನು ಖರೀದಿಸಲು ಪ್ರಯತ್ನಿಸಿ. ನಿಮಗೆ ಬೇಡದಿರುವ ವಸ್ತುಗಳನ್ನು ಮುಟ್ಟದಿರಿ. ಮಕ್ಕಳನ್ನು ಕರೆದೊಯ್ಯುವುದು ಅನಿವಾರ್ಯವಾದರೆ ಅವರಿಗೂ ಹೇಗೆ ವ್ಯವಹರಿಸಬೇಕು ಎಂಬುದನ್ನು ಹೇಳಿಕೊಡಿ. ಶಿಸ್ತಾಗಿರುವುದನ್ನು ಕಲಿಸಿ. ಅತ್ತಿಂದಿತ್ತ ಓಡಾಡಲು ಬಿಡದಿರಿ.