ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಮಹತ್ವದ ಸ್ಥಾನವಿದೆ. ಮಕರ ಸಂಕ್ರಾಂತಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಪದ್ಧತಿಯಲ್ಲಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಸೇರಿದಂತೆ ಹಬ್ಬದ ದಿನ ಮಹಿಳೆಯರು ಕೆಲ ತಪ್ಪುಗಳನ್ನು ಮಾಡಬಾರದು ಎಂದು ಗ್ರಂಥಗಳಲ್ಲಿ ಹೇಳಲಾಗಿದೆ.
ಧರ್ಮಗ್ರಂಥದ ಪ್ರಕಾರ ಸೂರ್ಯ ನೆತ್ತಿಗೆ ಬರುವವರೆಗೆ ಮಲಗಬಾರದು. ಬೇಗ ಎದ್ದು ನಿತ್ಯ ಕೆಲಸ ಮುಗಿಸಿ ಸ್ನಾನ ಮಾಡಬೇಕು.
ಅನೇಕರು ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡದೆ ಟೀ, ಬಿಸ್ಕಿಟ್ ಸೇವನೆ ಮಾಡ್ತಾರೆ. ಇದು ಒಳ್ಳೆಯದಲ್ಲ. ಈ ಹವ್ಯಾಸ ಮನೆಯ ನೆಮ್ಮದಿ ಹಾಳು ಮಾಡುತ್ತದೆ.
ಹಬ್ಬದ ದಿನ ಮನೆಗೆ ಮಕ್ಕಳು ಅಥವಾ ಭಿಕ್ಷುಕರು ಬಂದ್ರೆ ಅವ್ರನ್ನು ಬರಿಗೈನಲ್ಲಿ ಕಳುಹಿಸಬೇಡಿ. ಭಿಕ್ಷುಕರಿಗೆ ನಿಮ್ಮ ಕೈಲಾದದ್ದನ್ನು ದಾನ ಮಾಡಿ.
ಮಕರ ಸಂಕ್ರಾಂತಿ ಪ್ರಕೃತಿಗೆ ಸಂಬಂಧಿಸಿದ ಹಬ್ಬ. ಹಾಗಾಗಿ ಈ ದಿನ ಯಾವುದೇ ಫಲವನ್ನು ಕತ್ತರಿಸಬಾರದು ಎಂಬ ನಂಬಿಕೆಯಿದೆ.
ಮಕರ ಸಂಕ್ರಾಂತಿ ದಿನ ತಲೆ ಕೂದಲಿನ ಸ್ನಾನ ಮಾಡಬಾರದು. ಮರಗಳನ್ನು ಕತ್ತರಿಸುವ ಕೆಲಸ ಕೂಡ ಮಾಡಬಾರದು.
ಮಕರ ಸಂಕ್ರಾಂತಿ ದಿನ ತಯಾರಿಸುವ ವಿಶೇಷ ಭಕ್ಷ್ಯಗಳನ್ನು ತಪ್ಪದೆ ತಿನ್ನಬೇಕು. ಹಾಗೆ ಸಂಕ್ರಾಂತಿ ದಿನ ಎಳ್ಳನ್ನು ತಿನ್ನಲೇಬೇಕು.
ಹಬ್ಬದ ದಿನ ಸಂತೋಷವಾಗಿರಬೇಕು. ಯಾವುದೇ ಕಾರಣಕ್ಕೂ ಹಬ್ಬದ ದಿನ ಮಾಂಸ ಆಹಾರವನ್ನು ಸೇವಿಸಬಾರದು. ಮದ್ಯಪಾನ ಮಾಡಬಾರದು.
ಮಹಿಳೆ ಲಕ್ಷ್ಮಿ ಸ್ವರೂಪ. ಮನೆಯಲ್ಲಿರುವ ಮಹಿಳೆ ಜೊತೆ ಹಬ್ಬದ ದಿನ ಯಾವುದೇ ಗಲಾಟೆ ಮಾಡಬಾರದು. ಕೋಪ ಮಾಡಿಕೊಳ್ಳದೆ ಪ್ರೀತಿಯಿಂದ ಮಾತನಾಡಿಸಬೇಕು.