ನೀವು ಸೇವಿಸುವ ಕೆಲವು ಆಹಾರಗಳೇ ನಿಮ್ಮ ಲೈಂಗಿಕ ಆಸಕ್ತಿ ಕಡಿಮೆಯಾಗಲು ಕಾರಣವಾಗಬಹುದು ಎಂಬುದು ನಿಮಗೆ ಗೊತ್ತಾ…?
ಹೌದು ಸಕ್ಕರೆ ಅಥವಾ ಸಕ್ಕರೆಯ ಉತ್ಪನ್ನಗಳನ್ನು ಅತಿಯಾಗಿ ಸೇವಿಸುವುದರಿಂದ ಲೈಂಗಿಕ ಆಸಕ್ತಿ ಕಡಿಮೆಯಾಗಬಹುದು. ಇದರಿಂದ ಅನಗತ್ಯ ಬೊಜ್ಜು ಬೆಳೆದು ದೇಹದ ಆಕಾರ ವಿಕಾರವಾಗಬಹುದು. ಹಾಗಾಗಿ ಸಕ್ಕರೆಯಿಂದ ದೂರವಿದ್ದಷ್ಟು ಒಳ್ಳೆಯದು.
ಸೋಡಾದಲ್ಲೂ ಕೃತಕ ಸಿಹಿ ಹೆಚ್ಚಿಸುವ ಗುಣವಿದೆ. ಇದು ಸೆರೋಟೋನಿನ್ ಮೇಲೆ ನೇರ ಪರಿಣಾಮ ಬೀರುತ್ತದೆ. ಇದೇ ಹಾರ್ಮೋನ್ ಪುರುಷ ಹಾಗೂ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅತಿಯಾದ ಪುದೀನಾ ಸೊಪ್ಪಿನ ಬಳಕೆಯೂ ನಿಮ್ಮ ಆಸಕ್ತಿಯನ್ನು ಕುಗ್ಗಿಸಬಹುದು. ಚೀಸ್ ನಂತ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವುದರಿಂದ ಜೀರ್ಣ ಕ್ರಿಯೆ ನಿಧಾನವಾಗುತ್ತದೆ. ಇದರಿಂದ ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಕಾಣಿಸಿಕೊಂಡು ಹಾರ್ಮೋನ್ ಗಳ ಉತ್ಪಾದನೆ ಮತ್ತಷ್ಟು ಕಡಿಮೆಯಾಗಲು ಕಾರಣವಾಗಬಹುದು.
ಕೆಫಿನ್, ಆಲ್ಕೋಹಾಲ್ ಗಳೂ ದೇಹದ ಪ್ರಮುಖ ಅಂಗಗಳ ಮೇಲೆ ನೇರ ಪರಿಣಾಮ ಬೀರಿ ನಿಮ್ಮ ಸೆಕ್ಸ್ ಬದುಕಲ್ಲಿ ನಿರಾಸಕ್ತಿಗೊಳಿಸಬಹುದು. ಹಾಗಾಗಿ ಈ ಆಹಾರಗಳಿಂದ ದೂರವಿದ್ದಷ್ಟು ಒಳ್ಳೆಯದು.