ಹೆಚ್ಚಿನ ಮಹಿಳೆಯರು ರಾತ್ರಿ ಮಲಗುವಾಗ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದೇ ರೀತಿ ಕೂದಲಿನ ಆರೈಕೆ ಮಾಡುವುದು ತುಂಬಾ ಮುಖ್ಯ. ಹಾಗಾಗಿ ರಾತ್ರಿ ಮಲಗುವಾಗ ಕೂದಲಿನ ಆರೈಕೆ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
*ರಾತ್ರಿ ಚರ್ಮವನ್ನು ಹೈಡ್ರೀಕರಿಸಲು ಮಾಯಿಶ್ಚರೈಸರ್ ಹಚ್ಚುವಂತೆ ಕೂದಲಿನ ಹೊಳಪು ಮತ್ತು ತೇವಾಂಶಗೊಳಿಸಲು ಎಣ್ಣೆಯಿಂದ ಮಸಾಜ್ ಮಾಡಬೇಕು. ಬೆಳಿಗ್ಗೆ ಕೂದಲನ್ನು ವಾಶ್ ಮಾಡಬೇಕು.
*ರಾತ್ರಿ ಮಲಗುವಾಗ ಕೂದಲು ಒದ್ದೆಯಾಗಿದ್ದರೆ ಅದನ್ನು ಒಣಗಿಸಿ ಮಲಗಿ.
ಫೇಸ್ ಆಯಿಲ್ ಮಸಾಜ್ ನಿಂದ ಯಾವೆಲ್ಲಾ ಪ್ರಯೋಜನವಿದೆ ಗೊತ್ತಾ….?
*ನಿದ್ರಿಸುವಾಗ ಕೂದಲನ್ನು ಬಿಚ್ಚಿಡಬೇಡಿ. ಹಾಗೂ ಗಟ್ಟಿಯಾಗಿ ಗಂಟು ಹಾಕಿಕೊಳ್ಳಬೇಡಿ. ಇದರಿಂದ ಕೂದಲಿಗೆ ಹಾನಿಯಾಗುತ್ತದೆ. ಹಾಗಾಗಿ ಕೂದಲನ್ನು ಸಡಲವಾಗಿ ಕಟ್ಟಿಕೊಂಡು ಮಲಗಿ.
*ಮಲಗುವ ದಿಂಬಿನ ಬಟ್ಟೆ ಒರಟಾಗಿದ್ದರೆ ಇದರಿಂದ ಕೂದಲು ತುಂಡಾಗುತ್ತದೆ. ಹಾಗಾಗಿ ರೇಷ್ಮೆ ಬಟ್ಟೆಯ ದಿಂಬನ್ನು ಬಳಸಿ.