ಪಿಸಿಓಎಸ್ ಸಮಸ್ಯೆಯಿಂದಾಗಿ ಮಹಿಳೆಯರು ಹಲವು ತೊಂದರೆಗಳನ್ನು ಅನುಭವಿಸುತ್ತಾರೆ. ಇದರ ನಿವಾರಣೆಗೆ ಕೆಲವಷ್ಟು ಮನೆ ಮದ್ದುಗಳನ್ನು ನೀವು ಪ್ರಯತ್ನಿಸಿ ನೋಡಬಹುದು.
ಮೆಂತೆ, ಗ್ಲುಕೋಸ್ ಪ್ರಮಾಣ ನಿಯಂತ್ರಣದಲ್ಲಿಟ್ಟು ನಿಮ್ಮ ದೇಹ ತೂಕ ಕಡಿಮೆಯಾಗಲು ನೆರವಾಗುತ್ತದೆ. ಮೆಂತೆ ಬೀಜಗಳನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಗೆದ್ದು ಖಾಲಿ ಹೊಟ್ಟೆಗೆ ಆ ನೀರನ್ನು ಕುಡಿಯುವುದರಿಂದ ಕೊಬ್ಬು ಕರಗುತ್ತದೆ.
ದಾಲ್ಚಿನಿ ಪುಡಿಯನ್ನು ಮಾಡಿ ಇಟ್ಟುಕೊಳ್ಳಿ. ಇವುಗಳನ್ನು ಮೊಸರು ಅಥವಾ ಮಿಲ್ಕ್ ಶೇಕ್ ತಯಾರಿಸುವ ಚಿಟಿಕೆಯಷ್ಟು ಉದುರಿಸಿ ಸೇವಿಸಿ. ಬಿಸಿನೀರಿಗೆ ಚಿಟಿಕೆ ಪುಡಿ ಹಾಕಿ ಕುದಿಸಿ ಕುಡಿಯುವುದೂ ಒಳ್ಳೆಯದೇ.
ಮಹಿಳೆಯರ ಅಪ್ಪರ್ ಲಿಪ್ಸ್ ಕೂದಲ ಕಿರಿಕಿರಿಗೆ ಮನೆ ಮದ್ದು
ಒಮೆಗಾ 3 ಅಂಶ ಧಾರಾಳವಾಗಿರುವ ಅಗಸೆ ಬೀಜಗಳನ್ನು ಸೇವಿಸಿ. ಇವು ದೇಹದಲ್ಲಿ ಗ್ಲುಕೋಸ್ ಅನ್ನು ಬಳಸಲು ಸಹಾಯ ಮಾಡುತ್ತವೆ. ಪಿಸಿಓಎಸ್ ನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ಈ ಸಮಸ್ಯೆಯಿಂದ ಮುಖ ಹಾಗೂ ಕೈಕಾಲುಗಳ ಮೇಲೆ ವಿಪರೀತ ಕೂದಲು ಅಥವಾ ಮೊಡವೆಗಳು ಕಾಣಿಸಿಕೊಳ್ಳಬಹುದು. ಅಂಥ ಸಂದರ್ಭದಲ್ಲಿ ತುಳಸಿ ನೀರನ್ನು ಸೇವಿಸಿ. ಖಾಲಿ ಹೊಟ್ಟೆಗೆ 6-8 ತುಳಸಿ ಎಲೆಗಳನ್ನು ಜಗಿದು ತಿನ್ನಿ.