ಮಳೆಗಾಲದಲ್ಲಿ ಬಟ್ಟೆ ತೇವಗೊಳ್ಳುತ್ತದೆ. ಇದ್ರಿಂದ ವಾಸನೆ ಬರುತ್ತದೆ. ಇದಕ್ಕೆ ಎಷ್ಟು ಸೆಂಟ್ ಹೊಡೆದ್ರೂ ವಾಸನೆ ಹೋಗುವುದಿಲ್ಲ. ಈ ವಾಸನೆಯಿಂದ ಮುಕ್ತಿ ಪಡೆಯಲು ಸುಲಭ ಉಪಾಯ ಇಲ್ಲಿದೆ.
ಬಟ್ಟೆಯನ್ನು ಬೀರುವಿನೊಳಗೆ ಇಟ್ರೂ ವಾಸನೆ ಬರುತ್ತದೆ. ಶಿಲೀಂಧ್ರ ಕಾಣಿಸಿಕೊಳ್ಳುತ್ತದೆ. ವೋಡ್ಕಾ ಇದಕ್ಕೆ ಮದ್ದು. ಸ್ವಲ್ಪ ವೋಡ್ಕಾಕ್ಕೆ ನೀರು ಬೆರಸಿ. ಅದನ್ನು ಬಟ್ಟೆ ಮೇಲೆ ಸಿಂಪಡಿಸಿ. ನಂತ್ರ ಕಪಾಟಿನಲ್ಲಿ ಬಟ್ಟೆಯನ್ನು ಇಡಿ. ಇದು ವಾಸನೆ ಕಡಿಮೆಯಾಗುತ್ತದೆ.
ನಿಂಬೆ ರಸಕ್ಕೆ ನೀರು ಬೆರೆಸಿ ಅದನ್ನು ವಾಸನೆ ಬರುವ ಸ್ಥಳಕ್ಕೆ ಸಿಂಪಡಿಸಿ. ಬಟ್ಟೆಯ ಮೇಲೂ ಹಾಕಿ. ನಂತ್ರ ಬಟ್ಟೆಯನ್ನು ಸೋಪಿನಿಂದ ಸ್ವಚ್ಛಗೊಳಿಸಿದ್ರೆ ವಾಸನೆ ಹೋಗುತ್ತದೆ.
ಬಟ್ಟೆಯಿರುವ ಪ್ರದೇಶದಲ್ಲಿ ಅಡಿಗೆ ಸೋಡಾ ಸಿಂಪಡಿಸಬೇಕು. ಇದು ಕೂಡ ಬಟ್ಟೆ ವಾಸನೆ ಬರದಂತೆ ತಡೆಯುತ್ತದೆ.