ಇಂದು ಹೊರಗಿನಿಂದ ತರುವ ಪ್ರತಿಯೊಂದು ವಸ್ತುಗಳ ಮೇಲೂ ರಾಸಾಯನಿಕಗಳ ಸಿಂಪಡಣೆ ಮಾಡಿರುತ್ತಾರೆ ಎಂಬುದು ನಿಮಗೆಲ್ಲಾ ತಿಳಿದಿದೆ.
ಆದರೆ ಇದರ ಮಧ್ಯ ಕೊರೊನಾ ಸೋಂಕಿನ ಭಯ, ಸರಿಯಾಗಿ ಸ್ವಚ್ಛಗೊಳಿಸದ ಹಣ್ಣುಗಳ ಸೇವನೆಯಿಂದ ದೇಹದ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿಯೋಣ.
ಹಣ್ಣಿನ ತಾಜಾತನ ಕೆಡದಂತೆ ಕಾಪಾಡಲು ಅದರ ಮೇಲೆ ವ್ಯಾಕ್ಸ್ ಹಚ್ಚಿಡುತ್ತಾರೆ. ಇದರಿಂದ ಹಣ್ಣಿಗೆ ಯಾವುದೇ ಕೀಟ ಬಾಧೆ ಸಮಸ್ಯೆ ಕಾಡದು. ಹಾಗಾಗಿ ಇದನ್ನು ಪ್ರತಿಯೊಬ್ಬರೂ ಸಿಂಪಡಿಸುತ್ತಾರೆ.
ಇದನ್ನು ಸ್ವಚ್ಛವಾಗಿ ತೊಳೆದು ತಿನ್ನುವುದೇ ಇದಕ್ಕೊಂದು ಪರಿಹಾರ. ಸಿಪ್ಪೆ ತೆಗೆದು ತಿನ್ನುವುದು ಒಳ್ಳೆಯದು. ವ್ಯಾಕ್ಸ್ ನಲ್ಲಿನ ಕೆಮಿಕಲ್ ಯಕೃತ್ ಅಥವಾ ಕಿಡ್ನಿಯ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮತ್ತೆ ಕೆಲವರಿಗೆ ಕ್ಯಾನ್ಸರ್ ಅಪಾಯವನ್ನೂ ತಂದೊಡ್ಡಬಹುದು. ಅಲರ್ಜಿ ಸಮಸ್ಯೆಯನ್ನೂ ತಂದೊಡ್ಡಬಹುದು.
ಹಣ್ಣು ಕೊಳ್ಳುವ ವೇಳೆ ಬಣ್ಣ ಕಂಡು ಮರುಳಾಗದಿರಿ. ಆಯಾ ಸೀಸನ್ ನಲ್ಲಿ ಸಿಗುವ ಫ್ರೆಶ್ ಹಣ್ಣುಗಳನ್ನೇ ಖರೀದಿಸಿ. ಅದರ ಮೇಲೆ ಅಂಟಿಸಿರುವ ಲೇಬಲ್ ಅನ್ನು ಗಮನಿಸಿ. ತೊಳೆಯದೆ ತಿನ್ನುವುದನ್ನು ಬಿಡಿ.
ಬೆಚ್ಚನೆಯ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಹಣ್ಣುಗಳನ್ನು ತೊಳೆದು ಬಳಸುವುದು ಉತ್ತಮ.