ಕೊರೊನಾದಿಂದ ಶಾಲೆಯಂತೂ ಮಕ್ಕಳ ಪಾಲಿಗೆ ಇಲ್ಲದಂತಾಗಿದೆ. ಇಡೀ ಹೊತ್ತು ಮನೆಯಲ್ಲಿಯೇ ನನ್ನ ಕಣ್ಣೆದುರೇ ಇರು ಎಂದರೆ ಯಾವ ಮಕ್ಕಳು ತಾನೇ ಕೇಳಿಯಾರು ಹೇಳಿ…? ಹಾಗಂತ ಮಕ್ಕಳನ್ನು ಅವರ ಇಷ್ಟದಂತೆ ಬಿಡುವುದಕ್ಕೂ ಆಗದೇ ಮಕ್ಕಳ ಜತೆಗೆ ತಾಯಿಯೂ ಕೂಡ ಸ್ಟ್ರೆಸ್ ಫೀಲ್ ಮಾಡುವ ಹಾಗೇ ಹಾಗಿದೆ.
ನೀವು ಕೂಡ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಗಲಿಗೇರಿಸಿಕೊಂಡವರು ಆಗಿದ್ದರೆ ಮೊದಲು ನಿಮ್ಮ ನಿತ್ಯದ ವೇಳಾಪಟ್ಟಿಯನ್ನು ಸ್ವಲ್ಪ ಬದಲಾಯಿಸಿಕೊಂಡು ನೋಡಿ.
ಹಣ, ಕೆಲಸ ತುಂಬಾ ಮುಖ್ಯವಾದದ್ದು. ಇದರ ಜತೆಗೆ ಮಕ್ಕಳು ಕೂಡ ಇವೆರಡಕ್ಕಿಂತಲೂ ಹೆಚ್ಚು. ಹಾಗಾಗಿ ಅವರ ಮನಸ್ಸಿನಲ್ಲಿ ಒಮ್ಮೆ ಒಂಟಿತನ ಕಾಡುವುದಕ್ಕೆ ಶುರುವಾದರೆ ಅದು ಅವರ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
ಹಲಸಿನ ಬೀಜದ ಸ್ಕ್ರಬ್ ಮಾಡಿ ಚರ್ಮದ ಹೊಳಪು ಹೆಚ್ಚಿಸಿ….!
ಹಾಗಾಗಿ ಅಡುಗೆ, ಕ್ಲೀನಿಂಗ್ ಇತ್ಯಾದಿ ಕೆಲಸವನ್ನು ಆದಷ್ಟು ಬೇಗನೆ ಮುಗಿಸಿಕೊಳ್ಳುವುದಕ್ಕೆ ಟ್ರೈ ಮಾಡಿ. ಆಗ ಮಕ್ಕಳ ಜತೆ ಬೆರೆಯುವುದಕ್ಕೆ ಸಮಯ ಸಿಗುತ್ತದೆ. ಇಲ್ಲದಿದ್ದರೆ ಅಡುಗೆ ಆಗಿಲ್ಲ ಎಂಬ ಟೆನ್ಷನ್, ಮಕ್ಕಳ ಕಿರಿಕಿರಿ, ಕೆಲಸದ ಒತ್ತಡ ಇವೆಲ್ಲದರಿಂದ ಸಿಟ್ಟು ಬೇಗನೆ ಬಂದು ಬಿಡುತ್ತದೆ. ನಮ್ಮ ಸಿಟ್ಟು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇನ್ನು ಮಕ್ಕಳ ಜತೆ ಬೆರೆಯುತ್ತಲೇ ಅವರಿಗೆ ನಿಮ್ಮ ಕೆಲಸದ ಒತ್ತಡ, ಮನೆಯ ಆರ್ಥಿಕ ಪರಿಸ್ಥಿತಿ ಕುರಿತು ತಿಳಿ ಹೇಳಿ. ಬೈಯುವುದಕ್ಕಿಂತ ಮೃದು ಮಾತಿನ ಮೂಲಕ ಅವರಿಗೆ ವಿವರಿಸಿ.