ಪ್ರತಿ ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಈ ಕೆಲವು ರೋಗಗಳು ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ. ಅದರಿಂದ ತಪ್ಪಿಸಿಕೊಳ್ಳಲು ಏನು ಮಾಡಬಹುದು.
ಬೇಸಿಗೆಯ ಬಿಸಿಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಚಿಕನ್ ಫಾಕ್ಸ್ ತ್ವಚೆಯನ್ನು ಕೆಂಪಾಗಿಸಿ ಅಲ್ಲಲ್ಲಿ ಬೊಬ್ಬೆಗಳು ಮೂಡುವಂತೆ ಮಾಡುತ್ತದೆ. ಒಬ್ಬರಿಂದ ಒಬ್ಬರಿಗೆ ಹರಡುವ ಈ ಸೋಂಕು ಜ್ವರದಿಂದ ನಿಮ್ಮನ್ನು ಬೆಂಡಾಗಿಸುತ್ತದೆ.
ಇದನ್ನು ತಪ್ಪಿಸಲು ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯಿರಿ. ಮನೆಯಿಂದ ಹೊರಹೋಗಿ ಮರಳಿ ಬಂದ ಬಳಿಕ ಸ್ನಾನ ಮಾಡಲು ಮರೆಯದಿರಿ.
ಕೈಗಳಲ್ಲಿನ ಬೆಳ್ಳುಳ್ಳಿ ವಾಸನೆ ತೆಗೆಯಲು ಇದರಿಂದ ವಾಶ್ ಮಾಡಿ
ಬೇಸಿಗೆಯಲ್ಲಿ ಹಳದಿ ರೋಗವೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಾಮಾಲೆ ಎಂದು ಕರೆಯಿಸಿಕೊಳ್ಳುವ ಇದು ಬಂದರೆ ದೇಹದ ಎಲ್ಲಾ ಭಾಗಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ವಿಪರೀತ ಜ್ವರ ಕಾಡುತ್ತದೆ.
ಶುಚಿತ್ವವಿಲ್ಲದ ನೀರು ಹಾಗೂ ಆಹಾರದ ಸೇವನೆ ಇದಕ್ಕೆ ಮುಖ್ಯ ಕಾರಣವಾಗುತ್ತದೆ. ಕುದಿಸಿ ಆರಿಸಿದ ನೀರನ್ನು ಕುಡಿಯುವ ಮೂಲಕ ನಿಮ್ಮ ಆರೋಗ್ಯದ ಕಾಳಜಿ ಮಾಡಿ.