ಮಾಸ್ಕ್ ಬಳಕೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಕೆಲವರು ಸಡಿಲವಾದ ಮಾಸ್ಕ್ ಧರಿಸಿದರೆ ಪದೇ ಪದೇ ಜಾರುತ್ತಿರುತ್ತದೆ ಎಂಬ ಕಾರಣಕ್ಕೆ ಬಿಗಿಯಾದ ಮಾಸ್ಕ್ ಧರಿಸುತ್ತಾರೆ. ಇದರಿಂದ ಹಲವು ಚರ್ಮದ ರೋಗಗಳು ಹುಟ್ಟಿಕೊಳ್ಳುತ್ತಿವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.
ಮಾಸ್ಕ್ ಧರಿಸುವ ಭಾಗದಲ್ಲಿ ಕಲೆ, ತುರಿಕೆ ಕಾಣಿಸಿಕೊಂಡು ಚರ್ಮ ವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸುದೀರ್ಘ ಸಮಯ ಮಾಸ್ಕ್ ತೊಟ್ಟು ಕೆಲಸ ಮಾಡುವುದರಿಂದ ತುರಿಕೆ, ಮೊಡವೆ, ಗಾಯ, ಚರ್ಮದ ಬಣ್ಣ ಬದಲಾವಣೆಯಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಯಾವುದೇ ಕ್ರೀಮ್ ಹಚ್ಚಿದರೂ ಕಡಿಮೆಯಾಗದೆ ಉರಿಯೂ ಕಾಣಿಸಿಕೊಳ್ಳುತ್ತಿದೆ. ಮಾಸ್ಕ್ ಧರಿಸುವ ಭಾಗದಲ್ಲಿ ತೇವಾಂಶ, ಕೊಳೆ, ಬೆವರು ಉಳಿದುಕೊಂಡು ತ್ವಚೆಯ ಸಿಪ್ಪೆ ಏಳುವ ಸಮಸ್ಯೆಗಳೂ ಕಾಡುತ್ತಿವೆ.
ಸೂಕ್ಷ್ಮ ತ್ವಚೆ ಹೊಂದಿರುವವರಿಗೆ ಮಾತ್ರ ಈ ಸಮಸ್ಯೆಗಳು ಕಾಣಿಸಕೊಂಡಿವೆಯೇ ಹೊರತು ಎಲ್ಲರಿಗಲ್ಲ. ಹಾಗಾಗಿ ಪ್ರತಿಯೊಬ್ಬರೂ ಮಾಸ್ಕ್ ತೆಗೆದ ಬಳಿಕ ಸೋಪ್ ಹಾಕಿ ಮುಖ ತೊಳೆದುಕೊಳ್ಳಿ. ಒದ್ದೆಯಾದ ಮಾಸ್ಕ್ ಧರಿಸದಿರಿ.
ಇಡೀ ದಿನ ಮಾಸ್ಕ್ ಹಾಕಿಕೊಳ್ಳಬೇಕಿದ್ದಲ್ಲಿ ಎರಡರಿಂದ ಮೂರು ಬಾರಿ ಮಾಸ್ಕ್ ಬದಲಿಸಿ. ನಿತ್ಯ ತೊಳೆದು ಹಾಕಿದ ಮಾಸ್ಕ್ ಅನ್ನು ಮರೆಯದೆ ಮನೆಯಿಂದ ಕೊಂಡೊಯ್ಯಿರಿ.