ಫ್ರಿಜ್ ನಿಮ್ಮ ಕೆಲಸಗಳನ್ನು ಸುಲಭಗೊಳಿಸುತ್ತವೆ ನಿಜ. ಆದರೆ ಅದನ್ನು ಆಗಾಗ ಬಳಸುವುದರಿಂದ ಅದರ ಮೇಲ್ಭಾಗದಲ್ಲಿ ಕಲೆಗಳು ಬೀಳುತ್ತವೆ. ಇದನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಹಾಗಾಗಿ ಫ್ರಿಜ್ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.
* ಫ್ರಿಜ್ ಮೇಲೆ ಆಗಿರುವ ಕಲೆಗಳನ್ನು ನಿವಾರಿಸಲು ಕೂದಲಿಗೆ ಬಳಸುವ ಕಂಡೀಷನರ್ ನ್ನು ಬಳಸಬಹುದು. ಬಟ್ಟೆಯ ಮೇಲೆ ಸ್ವಲ್ಪ ಕಂಡೀಷನರ್ ನ್ನು ಸೇರಿಸಿ ಚೆನ್ನಾಗಿ ಉಜ್ಜಿ. ಇದರಿಂದ ಫ್ರಿಜ್ ಮೇಲಿದ್ದ ಕಲೆ ಸುಲಭವಾಗಿ ಹೋಗುತ್ತದೆ. ಮತ್ತು ಫ್ರಿಜ್ ಹೊಳೆಯುತ್ತದೆ.
* ನೀರಿಗೆ ನಿಂಬೆ ಹಣ್ಣಿನ ರಸ ಮಿಕ್ಸ್ ಮಾಡಿ ಅದರನ್ನು ಬಟ್ಟೆಗಳನ್ನು ಅದ್ದಿ ಫ್ರಿಜ್ ಅನ್ನು ಒರೆಸಿ. ಇದರಿಂದ ಫ್ರಿಜ್ ನ ಕಲೆಗಳು ಸುಲಭವಾಗಿ ಹೋಗಿ ಫ್ರಿಜ್ ಕ್ಲೀನ್ ಆಗುವುದಲ್ಲದೇ ಫ್ರಿಜ್ ನಲ್ಲಿ ಬರುತ್ತಿರುವ ವಾಸನೆ ನಿವಾರಣೆಯಾಗುತ್ತದೆ.