ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೆ ಅನನ್ಯ ಅನುಭವ. ಎಲ್ಲ ಮಹಿಳೆಯರು ಮಕ್ಕಳನ್ನು ಬಯಸ್ತಾರೆ. ಆದರೆ ಅನೇಕರಿಗೆ ಎಷ್ಟು ಚಿಕಿತ್ಸೆ ಪಡೆದ್ರೂ ಮಕ್ಕಳಾಗುವುದಿಲ್ಲ. ಈ ಸಂದರ್ಭದಲ್ಲಿ ಸಮಾಜ ಮಹಿಳೆಯನ್ನು ದೂಷಿಸುತ್ತದೆ. ಆದ್ರೆ ಇದ್ರಲ್ಲಿ ಮಹಿಳೆ ತಪ್ಪು ಮಾತ್ರ ಇರುವುದಿಲ್ಲ. ಪತಿಯ ತಪ್ಪೂ ಇರುತ್ತದೆ. ಪತ್ನಿ ತಾಯಿಯಾಗದಿರಲು ಪುರುಷರ ಬಂಜೆತನವು ಒಂದು ಮುಖ್ಯ ಕಾರಣವಾಗಿದೆ.
ಪುರುಷರ ಕಡಿಮೆ ಗುಣಮಟ್ಟದ ವೀರ್ಯ ಬಂಜೆತನಕ್ಕೆ ಕಾರಣವಾಗುತ್ತದೆ. ಪುರುಷ ಬಂಜೆತನವೆಂದರೆ ಪುರುಷರು ತಂದೆಯಾಗದಿರುವುದು. ಸರಳ ಭಾಷೆಯಲ್ಲಿ ಹೇಳುವುದಾದ್ರೆ, ಬಂಜೆತನ ಎಂದರೆ ವೀರ್ಯವು ಸರಿಯಾಗಿ ಉತ್ಪತ್ತಿಯಾಗದಿರುವುದು. ಇಲ್ಲವೆ ವೀರ್ಯವು ತುಂಬಾ ದುರ್ಬಲವಾಗಿರುವುದು.
ಕಳಪೆ ಗುಣಮಟ್ಟದ ವೀರ್ಯ, ವೀರ್ಯದ ಗಾತ್ರದಲ್ಲಿ ಸಮಸ್ಯೆ, ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಕೆಯನ್ನು ಬಂಜೆತನದ ವಿಧ ಎನ್ನಬಹುದು. ಹಾರ್ಮೋನುಗಳ ಸಮಸ್ಯೆ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ. ಸಮಯೋಚಿತ ಚಿಕಿತ್ಸೆಯ ಅಗತ್ಯವಿದೆ.
ಅನಾರೋಗ್ಯಕರ ಜೀವನಶೈಲಿಯ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ. ಅತಿಯಾದ ಧೂಮಪಾನ ಮತ್ತು ಆಲ್ಕೊಹಾಲ್ ಸೇವನೆಯು ಬಂಜೆತನ ಉಂಟು ಮಾಡುತ್ತದೆ. ಉತ್ತಮ ಜೀವನಶೈಲಿ, ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವ ಔಷಧಿಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬಹುದು.