ಒಂದು ಚಮಚ ನಿಂಬೆರಸವನ್ನು ನಿತ್ಯ ಸೇವಿಸುವುದರಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ?
ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಬಿಸಿನೀರಿಗೆ ಒಂದು ಚಮಚ ಲಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು.
ಬೇವನ್ನು 3 ಹಂತದಲ್ಲಿ ಬಳಸುವ ಮೂಲಕ ಮುಖದ ಸೌಂದರ್ಯ ಹೆಚ್ಚಿಸಿ
ಜೀರ್ಣಕ್ರಿಯೆ ಚುರುಕುಗೊಳಿಸಿ ಉದರ ಸಂಬಂಧಿ ಸಮಸ್ಯೆಗಳನ್ನು ದೂರಮಾಡುತ್ತದೆ. ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಕಡ್ಡಾಯವಾಗಿ ಇದರಿಂದ ದೂರವಿರಬೇಕು.
ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಲು ನಿಂಬೆ ಹಣ್ಣಿನ ರಸ ಹೇಳಿ ಮಾಡಿಸಿದ ಮದ್ದು. ವಸಡುಗಳನ್ನು ನಿಂಬೆ ಸಿಪ್ಪೆಯಿಂದ ಉಜ್ಜಿ ಸ್ವಚ್ಛಗೊಳಿಸುವುದರಿಂದ ಬಾಯಿಯ ವಾಸನೆಯ ಸಮಸ್ಯೆ ದೂರವಾಗುತ್ತದೆ.