ಪ್ರಪಂಚದಾದ್ಯಂತ ಜನರು ಸುಖ ದಾಂಪತ್ಯ ಜೀವನಕ್ಕೆ ಸೆಕ್ಸ್ ಅಗತ್ಯ ಎಂಬುದನ್ನು ಒಪ್ಪಿಕೊಳ್ತಾರೆ. ಆದ್ರೆ ಬೇರೆ ಬೇರೆ ದೇಶಗಳಲ್ಲಿ ಸೆಕ್ಸ್ ಗೆ ಸಂಬಂಧಿಸಿದ ನಂಬಿಕೆಗಳು ಮಾತ್ರ ಚಿತ್ರ – ವಿಚಿತ್ರವಾಗಿವೆ. ಕೆಲವೊಂದು ದೇಶಗಳಲ್ಲಿ ಜಾರಿಯಲ್ಲಿರುವ ನಂಬಿಕೆ ಆಶ್ಚರ್ಯ ಹುಟ್ಟಿಸುತ್ತದೆ.
ಇಂಡೋನೇಷ್ಯಾದ ಜಾವಾದಲ್ಲಿರುವ ಪವಿತ್ರ ಪರ್ವತವೊಂದರಲ್ಲಿ ವರ್ಷದಲ್ಲಿ ಏಳು ಬಾರಿ ಕಾರ್ಯಕ್ರಮವೊಂದನ್ನು ಆಚರಿಸಲಾಗುತ್ತದೆ. ಇಲ್ಲಿಗೆ ಬರುವ ಯಾತ್ರಿಗಳು ಪತಿ ಅಥವಾ ಪತ್ನಿ ಬಿಟ್ಟು ಅಪರಿಚಿತರ ಜೊತೆ ಸಂಬಂಧ ಬೆಳೆಸುತ್ತಾರೆ. ಹೀಗೆ ಮಾಡಿದ್ರೆ ಅದೃಷ್ಟ ಬದಲಾಗುತ್ತದೆ ಎಂಬ ನಂಬಿಕೆ ಅಲ್ಲಿನವರಿಗಿದೆ.
ಕೊಲಂಬಿಯಾದ ಗುವಾಜಿರೋ ಸಮುದಾಯದಲ್ಲಿ ಸಾಂಪ್ರದಾಯಿಕ ನೃತ್ಯವನ್ನು ಏರ್ಪಡಿಸಲಾಗುತ್ತದೆ. ನೃತ್ಯದ ವೇಳೆ ಯಾವ ಪುರುಷನ ಜೊತೆ ಮಹಿಳೆ ನೃತ್ಯ ಮಾಡ್ತಾಳೋ ಆತನ ಜೊತೆ ಸಂಬಂಧ ಬೆಳೆಸಬೇಕಾಗುತ್ತದೆ.
ಐರ್ಲೆಂಡ್ ನ ಸಣ್ಣ ದ್ವೀಪ ಪ್ರದೇಶದಲ್ಲಿ ಸೆಕ್ಸ್ ಬಗ್ಗೆ ವಿಚಿತ್ರ ಕಲ್ಪನೆಯಿದೆ. ಸೆಕ್ಸ್ ಆರೋಗ್ಯಕ್ಕೆ ಹಾನಿಕರವೆಂದು ಅವ್ರು ಭಾವಿಸುತ್ತಾರೆ. ಸಂಭೋಗದ ವೇಳೆ ಒಳ ಉಡುಪನ್ನು ಅವ್ರು ತೆಗೆಯುವುದಿಲ್ಲ.
ಟೋಂಗಾ ಬುಡಕಟ್ಟಿನಲ್ಲಿ ಪ್ರೀತಿ ವ್ಯಕ್ತಪಡಿಸಲು ಮುತ್ತು ನೀಡುವಂತಿಲ್ಲ. ಅಲ್ಲಿ ಮುತ್ತಿನ ಮೇಲೆ ನಿಷೇಧ ಹೇರಲಾಗಿದೆ. ಅದು ಆರೋಗ್ಯಕ್ಕೆ ಹಾನಿಕರವೆಂದು ಜನರು ಭಾವಿಸುತ್ತಾರೆ.