ಚಳಿಗಾಲ ಶುರುವಾಗುತ್ತಿದ್ದಂತೆ ಕೈ, ಕಾಲುಗಳು ಒಡೆಯುವುದು, ತುಟಿ ಒಡೆಯುವುದು ಇಂತಹ ಸಮಸ್ಯೆಗಳು ಕಂಡು ಬರುತ್ತದೆ. ಹಾಗಾಗಿ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ವ್ಯಾಸಲಿನ್ ಜೆಲ್ಲಿ ತಂದಿಟ್ಟುಕೊಂಡಿರುತ್ತಾರೆ. ಮನೆಯಲ್ಲಿ ವ್ಯಾಸಲಿನ್ ಡಬ್ಬ ಇದ್ದರೆ ಎಷ್ಟೆಲ್ಲಾ ಪ್ರಯೋಜನವಿದೆ ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.
ನಿಮ್ಮ ಬೇಡ್ ಶೀಟ್, ದಿಂಬಿನ ಕವರ್ ಗಳ ಮೇಲೆ ಏನಾದರೂ ಕಲೆ ಇದ್ದರೆ ಇದನ್ನು ಮೊದಲು ನೀರಿನಿಂದ ಒದ್ದೆ ಮಾಡಿಕೊಂಡು ಅದರ ಮೇಲೆ ಸ್ವಲ್ಪ ವ್ಯಾಸಲಿನ್ ಹಾಕಿ ತಿಕ್ಕಿ ನಂತರ ಇದನ್ನು ಒಗೆಯಿರಿ. ಕಲೆಗಳು ಹೋಗುತ್ತದೆ.
ಇನ್ನು ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚುವಾಗ ಅದು ಉಗುರಿನ ಹೊರಭಾಗಕ್ಕೆಲ್ಲಾ ತಾಗುತ್ತದೆ. ಇದನ್ನು ತಪ್ಪಿಸಲು ಒಂದು ಹತ್ತಿಯ ಸಹಾಯದಿಂದ ವ್ಯಾಸಲಿನ್ ಅನ್ನು ನಿಮ್ಮ ಕೈ ಉಗುರಿನ ಸುತ್ತಮುತ್ತಲಿನ ಜಾಗಕ್ಕೆ ತೆಳುವಾಗಿ ಹಚ್ಚಿ ನಂತರ ನೈಲ್ ಪಾಲಿಶ್ ಹಚ್ಚಿ. ನೈಲ್ ಪಾಲಿಶ್ ಒಣಗಿದ ಮೇಲೆ ಕೈಅನ್ನು ನೀರಿನಿಂದ ತೊಳೆದು ಒರೆಸಿಕೊಳ್ಳಿ. ಇದರಿಂದ ಎಲ್ಲೆಡೆ ನೈಲ್ ಪಾಲಿಶ್ ಹರಡುವುದು ತಪ್ಪುತ್ತದೆ.
ಇನ್ನು ಕೆಲವರು ಮೇಕಪ್ ರಿಮೂವ್ ಮಾಡುವುದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಮೇಕಪ್ ರಿಮೂವರ್ ಗಳನ್ನು ತರುತ್ತಾರೆ. ಅದರ ಬದಲು ವ್ಯಾಸಲಿನ್ ಉಪಯೋಗಿಸಿ ನಿಮ್ಮ ಮೇಕಪ್ ಅನ್ನು ಸುಲಭವಾಗಿ ರಿಮೂವ್ ಮಾಡಬಹುದು. ಐ ಲೈನರ್, ಐ ಶ್ಯಾಡೊ, ಮಸ್ಕರಾ ಇವುಗಳನ್ನು ಹಾಕಿಕೊಂಡಾಗ ವ್ಯಾಸಲಿನ್ ಅನ್ನು ಉಪಯೋಗಿಸಿ ಇದನ್ನು ಸುಲಭದಲ್ಲಿ ಕ್ಲೀನ್ ಮಾಡಬಹುದು.
ಇನ್ನು ಕೆಲವೊಮ್ಮೆ ಚುಯಿಂಗ್ ಗಮ್ ನಿಮ್ಮ ತಲೆಕೂದಲಿಗೆ ಅಂಟಿಕೊಂಡಿದ್ದರೆ ಆಗ ವ್ಯಾಸಲಿನ್ ಅನ್ನು ಆ ಚ್ಯುಯಿಂಗ್ ಗಮ್ ಮೇಲೆ ಹಾಗೂ ಅದು ಅಂಟಿಕೊಂಡ ಜಾಗದ ಸುತ್ತಮುತ್ತ ಹಚ್ಚಿ ನಿಧಾನಕ್ಕೆ ತಿಕ್ಕಿದರೆ ಗಮ್ ಸುಲಭದಲ್ಲಿ ಬಿಟ್ಟು ಬಿಡುತ್ತದೆ.