alex Certify ತಳ ಹಿಡಿದ ಪಾತ್ರೆ ಸ್ವಚ್ಛ ಮಾಡುವುದು ಈಗ ಬಲು ಸುಲಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಳ ಹಿಡಿದ ಪಾತ್ರೆ ಸ್ವಚ್ಛ ಮಾಡುವುದು ಈಗ ಬಲು ಸುಲಭ

ಅಡುಗೆ ಮನೆಯಲ್ಲಿ ಪಾತ್ರೆ ತಳ ಹಿಡಿಯುವುದು, ಅಡಿ ಸುಡುವುದು ಆಗಾಗ ಸಂಭವಿಸುತ್ತದೆ. ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಮನೆಯಲ್ಲೇ ಇರುವ ಈ ವಸ್ತುಗಳ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ತಳ ಹಿಡಿದ ಭಾಗಕ್ಕೆ ಸ್ವಲ್ಪ ಉಪ್ಪು ಹಾಕಿ ಉಜ್ಜಿ. ಬಳಿಕ ಸೋಪಿನಿಂದ ತಿಕ್ಕಿ ತೊಳೆಯಿರಿ. ಆಗ ಸುಟ್ಟ ಭಾಗ ಸ್ವಚ್ಛವಾಗಿ ಪಾತ್ರೆ ಮೊದಲಿನಂತೆ ಹೊಳಪು ಪಡೆಯುತ್ತದೆ.

ಸ್ಥೂಲಕಾಯದ ಕುರಿತು ಇರಲಿ ಎಚ್ಚರ….!

ಇನ್ನು ಅಡುಗೆ ಸೋಡಾದಿಂದಲೂ ಇದೇ ಫಲಿತಾಂಶ ಪಡೆಯಬಹುದು. ಅಡುಗೆ ಸೋಡಾಗೆ ತುಸು ನೀರು ಬೆರೆಸಿ, ತಳ ಹಿಡಿದ ಭಾಗಕ್ಕೆ ಹಾಕಿ ನೆನೆಯಲು ಇಡಿ. ಹದಿನೈದು ನಿಮಿಷದ ಬಳಿಕ ಬ್ರಶ್ ನಿಂದ ತಿಕ್ಕಿ ತೊಳೆದರೆ ಕಲೆ ಮಾಯವಾಗುತ್ತದೆ.

ಟೊಮೆಟೊ ಕೆಚಪ್ ಅನ್ನು ರಾತ್ರಿಯಿಡೀ ಪಾತ್ರೆಯಲ್ಲಿ ಹಾಕಿಟ್ಟು ಮರುದಿನ ಬೆಳಗ್ಗೆ ತಿಕ್ಕಿ ತೊಳೆಯಿರಿ. ಲಿಂಬೆರಸ ಅಥವಾ ಲಿಂಬೆಯ ಅರ್ಧ ಭಾಗದಿಂದಲೂ ಈ ಕಲೆಯನ್ನು ನೀವು ತೆಗೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...