ಹೊಸದಾಗಿ ಕೊಂಡ ಚಪ್ಪಲಿ ಕಾಲಿಗೆ ಕಚ್ಚುತ್ತಿದೆಯೇ. ಇದರಿಂದ ಆದ ಗಾಯ ಗುಣವಾಗಲು ಕೇಳುತ್ತಿಲ್ಲವೇ. ಹಾಗಿದ್ದರೆ ಇಲ್ಲಿ ಕೇಳಿ.
ಈ ಗಾಯ ಕಡಿಮೆಯಾಗಿ ಕಲೆ ಉಳಿಯದಂತೆ ಮಾಡಲು ನೀವು ನಿತ್ಯ ತೆಂಗಿನೆಣ್ಣೆಯನ್ನು ಆ ಜಾಗಕ್ಕೆ ಹಚ್ಚಿ. ಇದು ತ್ವಚೆಯನ್ನು ಮೃದು ಮಾಡುತ್ತದೆ. ಕಲೆಯನ್ನೂ ದೂರ ಮಾಡುತ್ತದೆ. ತೆಂಗಿನೆಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣ ಇರುವುದರಿಂದ ಗಾಯ ಬಹು ಬೇಗ ಮಾಗುತ್ತದೆ.
ಅಲೋವೇರಾದ ಒಳಭಾಗವನ್ನು ಗಾಯವಾಗಿರುವ ಜಾಗಕ್ಕೆ ಹಚ್ಚಿಕೊಳ್ಳುವುದರಿಂದ ಗಾಯ ಬೇಗ ಗುಣವಾಗುತ್ತದೆ ಮತ್ತು ಕಲೆಯೂ ಉಳಿಯುವುದಿಲ್ಲ.
ಬೇಸಿಗೆಯಲ್ಲಿ ಮೂಡುವ ಚರ್ಮದ ಬಿರುಕುಗಳನ್ನು ನಿವಾರಿಸಲು ಈ ವಿಧಾನ ಪಾಲಿಸಿ
ಶೂ ಕಡಿತದಿಂದಾದ ಗಾಯಕ್ಕೆ ಜೇನುತುಪ್ಪವನ್ನು ಹಚ್ಚಿಕೊಂಡರೆ ತಕ್ಷಣ ಗಾಯ ಹಾಗೂ ನೋವು ಶಮನವಾಗುತ್ತದೆ.
ಮಳಿಗೆಗಳಲ್ಲಿ ಸಿಗುವ ಅರಿಶಿನ ಪುಡಿಯ ಬದಲು ಮನೆಯಲ್ಲೇ ಕೋಡಿನಿಂದ ತೇದ ಅರಿಶಿನವನ್ನು ಗಾಯವಾದ ಜಾಗಕ್ಕೆ ಹಚ್ಚಿ. ಇದರಿಂದಲೂ ನೋವು ಬಹು ಬೇಗ ಕಡಿಮೆಯಾಗುತ್ತದೆ.