ಕೊರೊನಾ ಕಾರಣಕ್ಕೆ ಗರ್ಭಿಣಿಯರು ಭೀತಿ ಪಡಬೇಕಿಲ್ಲ. ತಾಯ್ತನದ ಸಂತಸ ಅನುಭವಿಸಲು ಇದು ಸಕಾಲ. ಆಸ್ಪತ್ರೆಗೆ ಟೆಸ್ಟ್ ಗೆ ಹೋಗುವುದರಿಂದ ನಮಗೂ ಬರಬಹುದು, ಹೆರಿಗೆ ಸಮಯದಲ್ಲಿ ಮಗುವಿಗೂ ಬರಬಹುದು ಎಂಬ ಹೆದರಿಕೆಯನ್ನು ಮೊದಲು ತೊಡೆದು ಹಾಕಿ.
ಕೊರೊನಾ ರೋಗಿಗಳ ಬಗ್ಗೆ ನಿಂದನೆ, ದೂಷಣೆ, ತಪ್ಪು ಅಭಿಪ್ರಾಯ ಬಿಂಬಿಸುವುದು ಅಲ್ಲಲ್ಲಿ ನಡೆಯುತ್ತಲೇ ಇದೆ. ಕೊರೊನಾ ರೋಗಿಗಳನ್ನು ತಾತ್ಸಾರ ಮಾಡಿ ಕೀಳಾಗಿ ಕಾಣುವ ಬದಲು ಅವರನ್ನೂ ಪ್ರೀತಿಯಿಂದ ಕಾಣಬೇಕು ಎನ್ನುತ್ತಾರೆ ವೈದ್ಯರು.
ಶಿಶುವಿನ ಆಗಮನಕ್ಕೆ ಸಂಭ್ರಮದಿಂದ ಕಾಯುತ್ತಿದ್ದ ತಾಯಿ – ತಂದೆ ಸೇರಿದಂತೆ ಮನೆಮಂದಿಯೆಲ್ಲಾ ಇಂದು ಆತಂಕದಲ್ಲಿ ನವಮಾಸಗಳನ್ನು ಕಳೆಯುವಂತಾಗಿದೆ. ಕೆಲವರಂತೂ ಈಗ ಮಗುವೇ ಬೇಡ, ಕೊರೊನಾ ಮುಗಿದ ಮೇಲೆ ನೋಡಿಕೊಳ್ಳೋಣ ಎನ್ನುತ್ತಿದ್ದಾರೆ.
ಹೀಗಿದ್ದೂ ಗರ್ಭಿಣಿಯರಿಗೆ ಪಾಸಿಟಿವ್ ಕಂಡು ಬಂದರೆ ಮನೆಮಂದಿ ಮೊದಲು ಅವರಲ್ಲಿ ಭರವಸೆ ತುಂಬಿ. ಯಾವುದೇ ಕಾರಣಕ್ಕೂ ಧೈರ್ಯಗೆಡಬೇಕಿಲ್ಲ ಎಂಬುದನ್ನು ತಿಳಿಸಿ ಹೇಳಿ. ಆರೋಗ್ಯಕರ ಜೀವನ ಕ್ರಮ, ಸಾಮಾಜಿಕ ಅಂತರ ಮತ್ತು ಮನೆಯಲ್ಲೇ ಇರುವುದರಿಂದ ಕೊರೊನಾ ಬರದಂತೆ ತಡೆಗಟ್ಟಬಹುದು.
ಹೆರಿಗೆಯಾದ ಬಳಿಕ ಮಗುವಿಗೆ ಪಾಸಿಟಿವ್ ಕಂಡು ಬಂದ ಉದಾಹರಣೆಯಂತೂ ಬಹಳ ಕಡಿಮೆ. ಹಾಗಾಗಿ ಚಿಂತೆ ಬಿಟ್ಟು ಹಾಯಾಗಿರಿ.