ಗರ್ಭಾವಸ್ಥೆಯಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸುವುದು ಮತ್ತು ಕ್ಯಾಲ್ಸಿಯಂ ಮಾತ್ರೆಗಳ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಕೆಲವೊಮ್ಮೆ ಗರ್ಭಾಶಯ ಅಥವಾ ಗುದನಾಳದ ಮೇಲೆ ಬೀಳುವ ಒತ್ತಡವೂ ಇದಕ್ಕೆ ಕಾರಣವಿರಬಹುದು.
ಇದರ ಪರಿಹಾರಕ್ಕೆ ಲಿಂಬೆ ಜ್ಯೂಸ್ ಕುಡಿಯಿರಿ. ವೈದ್ಯರು ನೀರು ಕುಡಿಯಿರಿ ಎಂದಿದ್ದರೂ ನಿಮಗೆ ಅದು ರುಚಿ ಎನಿಸದಿದ್ದರೆ ಎರಡು ಚಮಚ ಲಿಂಬೆರಸ ಹಾಗೂ ಸಕ್ಕರೆ ಬೆರೆಸಿದ ಲಿಂಬು ಜ್ಯೂಸ್ ತಯಾರಿಸಿ ಇಟ್ಟುಕೊಳ್ಳಿ. 2-3 ಲೋಟ ನಿಂಬೆ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆ ಚುರುಕುಗೊಳ್ಳುತ್ತದೆ.
ಬೆವರುವ ಅಂಗೈ ಸಮಸ್ಯೆಗೆ ಹೇಳಿ ʼಗುಡ್ ಬೈʼ
ಅಗಸೆ ಬೀಜಗಳಲ್ಲಿ ನಾರಿನಂಶ ಅಧಿಕವಾಗಿದ್ದು ಇದು ಮಲಬದ್ದತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಎದ್ದಾಕ್ಷಣ ಒಂದು ಚಮಚ ತೆಂಗಿನೆಣ್ಣೆಯನ್ನು ಸೇವಿಸಿ. ಇದರಿಂದಲೂ ನಿಮ್ಮ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ.
ಊಟವಾದ ಬಳಿಕ ಒಂದು ಕಪ್ ಮೊಸರು ಸೇವಿಸುವುದರ ಮೂಲಕ, ನೀರು ಅಥವಾ ಜೀರಿಗೆ ನೀರನ್ನು ಪದೇ ಪದೇ ಕುಡಿಯುತ್ತಿರುವುದರ ಮೂಲಕ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.