ಒಮೆಗಾ3 ನಮ್ಮ ದೇಹಕ್ಕೆ ಬೇಕಾಗುವ ಅತಿ ಅಗತ್ಯವಾದ ಪೋಷಕಾಂಶ. ಇದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಬಹುದು. ಹಾಗಾಗಿ ಒಮೆಗಾ3 ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. ಅಂತಹ ಆಹಾರ ಪದಾರ್ಥಗಳ ಪಟ್ಟಿ ಇಲ್ಲಿದೆ ನೋಡಿ.
*ನಿಮ್ಮ ಆಹಾರದಲ್ಲಿ ಚಿಯಾ ಬೀಜಗಳು, ಅಗಸೆಬೀಜಗಳನ್ನು ಹೆಚ್ಚಾಗಿ ಸೇರಿಸಿ.
*ಹಸಿರು ತರಕಾರಿಗಳು, ಸೊಪ್ಪುಗಳನ್ನು ಹೆಚ್ಚಾಗಿ ತಿನ್ನಿ.
*ಹಸಿವಾಗುವಾಗ ವಾಲ್ ನಟ್ಸ್, ಬಾದಾಮಿ, ಬೆರಿ ಹಣ್ಣುಗಳು ಮುಂತಾದವುಗಳನ್ನು ಬಳಸಿ.
*ಸಮುದ್ರಾಹಾರವಾದ ಮೀನುಗಳನ್ನು ಹೆಚ್ಚಾಗಿ ಸೇವಿಸಿ. ಇದರಲ್ಲಿ ಒಮೆಗಾ 3 ಸಮೃದ್ಧವಾಗಿರುತ್ತದೆ.
*ಪ್ರತಿದಿನ ಒಂದು ಮೊಟ್ಟೆಯನ್ನಾದರೂ ಸೇವಿಸಿ.