ಮಕ್ಕಳ ಜೊತೆ ಪ್ರಯಾಣ ಬೆಳೆಸುವುದು ಸುಲಭವಲ್ಲ.ಮಕ್ಕಳ ಪ್ರತಿಯೊಂದು ಅಗತ್ಯತೆ ಬಗ್ಗೆ ಗಮನ ನೀಡಬೇಕಾಗುತ್ತದೆ.
ಶೌಚಾಲಯದಿಂದ ಹಿಡಿದು ಆಹಾರದವರೆಗೆ ಎಲ್ಲದರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಮಕ್ಕಳ ಜೊತೆ ಪ್ರಯಾಣ ಮತ್ತಷ್ಟು ಕಷ್ಟ. ಮಕ್ಕಳನ್ನು ಜೊತೆಗೆ ಕರೆದೊಯ್ಯುವ ಸಂದರ್ಭದಲ್ಲಿ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಕೊರೊನಾ ಕಾಲದಲ್ಲಿ ಮಕ್ಕಳಿಗೆ ಅದ್ರ ಮಹತ್ವ ಗೊತ್ತಿಲ್ಲ. ಪಾಲಕರು ಮಕ್ಕಳಿಗೆ ಕೊರೊನಾ ಬಗ್ಗೆ ವಿವರಿಸಬೇಕು. ಅನಾರೋಗ್ಯ ಕಾಡಿದ್ರೆ ಏನೆಲ್ಲ ಸಮಸ್ಯೆಯಾಗುತ್ತೆ ಎಂಬುದನ್ನು ಮಕ್ಕಳಿಗೆ ತಿಳಿ ಹೇಳಿ. ಮಕ್ಕಳು ಸ್ವಲ್ಪ ಬೆಳೆದಿದ್ದು, ಕ್ಯಾರಿ ಬ್ಯಾಗ್ ಇಟ್ಟುಕೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದರೆ ಮಕ್ಕಳ ಬ್ಯಾಗ್ ನಲ್ಲಿ ಅಗತ್ಯ ವಸ್ತುಗಳನ್ನು ಇಡಿ. ಮಾಸ್ಕ್, ಸ್ಯಾನಿಟೈಜರ್ ಹಾಗೂ ನ್ಯಾಪ್ಕಿನ್ ಇಡಿ. ಇದನ್ನು ಹೇಗೆ ಬಳಸಬೇಕೆಂಬುದನ್ನು ಹೇಳಿ.
ಮಕ್ಕಳಿಗೆ ಮನೆಯ ಆಹಾರವನ್ನು ನೀಡಲು ಮರೆಯದಿರಿ. ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಪ್ಯಾಕ್ ಮಾಡಿಕೊಳ್ಳಿ. ಮಕ್ಕಳು ಆಗಾಗ ಆಹಾರ ಕೇಳುತ್ತಿರುತ್ತಾರೆ. ಹಾಗಾಗಿ ಹೆಚ್ಚಿನ ಆಹಾರ ಬ್ಯಾಗ್ ನಲ್ಲಿರಲಿ.
ಮಕ್ಕಳ ಜೊತೆ ಪ್ರಯಾಣ ಬೆಳೆಸುತ್ತಿದ್ದರೆ ಅದ್ರ ಅಗತ್ಯತೆ ಬಗ್ಗೆ ಇನ್ನೆರಡು ಬಾರಿ ಆಲೋಚನೆ ಮಾಡಿ. ನೀವು ಪ್ರಯಾಣ ಮಾಡ್ತಿರುವ ಪ್ರದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.
ರೈಲು, ಬಸ್, ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ ಆದಷ್ಟು ಮಕ್ಕಳನ್ನು ಕಿಟಕಿ ಬಳಿ ಕೂರಿಸಿ. ಬೇರೆಯವರಿಂದ ಮಕ್ಕಳು ಹೆಚ್ಚು ಅಂತರದಲ್ಲಿರುವಂತೆ ನೋಡಿಕೊಳ್ಳಿ.