ಸದ್ಯ ಎಲ್ಲರ ಸಮಸ್ಯೆ ಕೊರೊನಾ. ಮಹಾಮಾರಿಗೆ ಬಲಿಯಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ನಮ್ಮ ಕೆಲವೊಂದು ಹವ್ಯಾಸಗಳು ಸೋಂಕು ಬೇಗ ಹರಡಲು ಕಾರಣವಾಗುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಸ್ವಚ್ಛತೆ ಬಗ್ಗೆ ಗಮನ ನೀಡಬೇಕು.
ಉಗುರಿನಲ್ಲಿ ಎಲ್ಲಾ ರೀತಿಯ ಕೊಳಕಿರುತ್ತವೆ. ಕೆಲವರು ಹಲ್ಲಿನಿಂದ ಉಗುರನ್ನು ಕಡಿಯುತ್ತಾರೆ. ಆಗ ಉಗುರಿನಲ್ಲಿರುವ ಕೊಳಕು ದೇಹ ಸೇರುತ್ತದೆ. ಇದು ಅಪಾಯಕ್ಕೆ ಆಹ್ವಾನ ನೀಡುತ್ತದೆ. ಕೊರೊನಾ ನಿಯಂತ್ರಣಕ್ಕೆ ಮಾತ್ರವಲ್ಲ ಎಲ್ಲ ರೋಗದಿಂದ ರಕ್ಷಣೆ ಬೇಕೆನ್ನುವವರು ಉಗುರನ್ನು ಕಡಿಯಬಾರದು.
ಮೊಡವೆ ಸಮಸ್ಯೆ ಅನೇಕರನ್ನು ಕಾಡುತ್ತದೆ. ಪಾರ್ಲರ್ ಗೆ ಹೋಗಲು ಈಗ ಸಾಧ್ಯವಿಲ್ಲ. ಕೆಲವರು ಮೊಡವೆ ಒಡೆದು ಅದ್ರಿಂದ ಮುಕ್ತಿ ಪಡೆಯುವ ಪ್ರಯತ್ನ ನಡೆಸುತ್ತಾರೆ. ಇದು ಒಳ್ಳೆಯದಲ್ಲ. ಪದೇ ಪದೇ ಗುಳ್ಳೆಗಳನ್ನು ಸ್ಪರ್ಶಿಸಿದ್ರೆ ಸೋಂಕು ಹರಡುವ ಸಾಧ್ಯತೆಯಿರುತ್ತದೆ.
ಕೊರೊನಾ ಸಂಕಷ್ಟದಲ್ಲಿ ಭಾರತದ ಸಹಾಯಕ್ಕೆ ಮುಂದಾಯ್ತು ಪಾಕಿಸ್ತಾನದ ʼಎದಿ ಫೌಂಡೇಶನ್ʼ
ಬಹುತೇಕರು ಕೂದಲ ಜೊತೆ ಆಟವಾಡ್ತಾರೆ. ಕೂದಲಿನಲ್ಲಿ ಸೋಂಕು ಅಡಗಿ ಕುಳಿತಿರುತ್ತದೆ. ಕೈನಲ್ಲಿ ಕೂದಲನ್ನು ಮುಟ್ಟಿದಾಗ ಕೈಗೆ ಸೋಂಕು ತಗಲುತ್ತದೆ. ಕೈನಿಂದ ಮುಖ ಮುಟ್ಟಿದಾಗ ಅದು ದೇಹ ಸೇರುವುದು ಸುಲಭವಾಗುತ್ತದೆ.
ಬೆಡ್ ಶೀಟ್ ನಲ್ಲಿ ಸಾಮಾನ್ಯವಾಗಿ ಧೂಳಿರುತ್ತದೆ. ಅವುಗಳ ಮೇಲಿರುವ ಸೋಂಕು ಅನೇಕ ದಿನ ಬದುಕಬಲ್ಲವು. ಹಾಗಾಗಿ ಟವೆಲ್, ಬೆಡ್ ಶೀಟ್ ಗಳನ್ನು ವಾರದಲ್ಲಿ ಒಂದು ದಿನ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ. ಟವೆಲ್ ಗಳನ್ನು ವಾರದಲ್ಲಿ 2-3 ದಿನ ತೊಳೆಯಬೇಕು.
ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಾಗಾಗಿ ತಿನ್ನುವಾಗ ಆಹಾರವನ್ನು ಹಂಚಿಕೊಳ್ಳಬಾರದು.