ಕೈನಲ್ಲೊಂದು ಮೊಬೈಲ್ ಈಗ ಸಾಮಾನ್ಯ. ಅನೇಕರು ಮೊಬೈಲ್ ಬೇರೆಯವರು ನೋಡದಿರಲಿ ಎನ್ನುವ ಕಾರಣಕ್ಕೆ ಪಾಸ್ವರ್ಡ್ ಹಾಕಿರುತ್ತಾರೆ. ಪಾಸ್ವರ್ಡ್ ಹಾಕಿರುವ ಕಾರಣ ಮೊಬೈಲ್ ಓಪನ್ ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಂದು ತುರ್ತು ಪರಿಸ್ಥಿತಿಯಲ್ಲಿ ಮೊಬೈಲ್ ನಲ್ಲಿರುವ ನಂಬರ್ ಬೇರೆಯವರು ನೋಡುವುದು ಕಷ್ಟವಾಗುತ್ತದೆ. ಆ ಸಮಯದಲ್ಲಿ ಸಿಮ್ ಬದಲಿಸಿ ನಂಬರ್ ಪಡೆಯಬಹುದು.
ಉದಾಹರಣೆಗೆ ಅಪರಿಚಿತರಿಗೆ ಅಪಘಾತವಾಗಿದೆ ಎಂದಿಟ್ಟುಕೊಳ್ಳಿ. ಅವರನ್ನು ಆಸ್ಪತ್ರೆಗೆ ಸೇರಿಸಿದ ನಂತ್ರ ಅವರ ಸಂಬಂಧಿಕರಿಗೆ ಮಾಹಿತಿ ನೀಡಬೇಕು. ಆದ್ರೆ ಫೋನ್ ಗೆ ಪಾಸ್ವರ್ಡ್ ಹಾಕಿರಲಾಗಿರುತ್ತದೆ. ಇಂಥ ಸಂದರ್ಭದಲ್ಲಿ ಮೊಬೈಲ್ ಸಿಮ್ ತೆಗೆದು ಬೇರೆ ಮೊಬೈಲ್ ಗೆ ಹಾಕಬೇಕು. ಆಗ ಕಾಂಟೆಕ್ಟ್ ನಂಬರ್ ಬೇರೆ ಮೊಬೈಲ್ ಗೆ ವರ್ಗಾವಣೆಯಾಗುತ್ತದೆ.
ಮೊಬೈಲ್ ನಲ್ಲಿ ನಂಬರ್ ಸೇವ್ ಮಾಡುವಾಗ ಗೂಗಲ್ ನಲ್ಲಿ ಸೇವ್ ಮಾಡಬೇಕು. ಹಾಗೆ ಸಿಮ್ ನಲ್ಲಿಯೂ ನಂಬರ್ ಸೇವೆ ಮಾಡಿರಬೇಕು. ಆಗ ನಂಬರ್ ಪತ್ತೆ ಹಚ್ಚುವುದು ಸುಲಭವಾಗುತ್ತದೆ.