ಅಡುಗೆಮನೆಯನ್ನು ನೀವು ಎಷ್ಟು ಸ್ವಚ್ಛವಾಗಿ ಇಟ್ಟುಕೊಂಡರೂ ಕೆಲವೊಮ್ಮೆ ವಿಪರೀತ ಜಿರಳೆಗಳು ನಿಮ್ಮ ನಿದ್ದೆಕೆಡಿಸಿ ಬಿಡುತ್ತವೆ. ಇವುಗಳನ್ನು ಹೇಗೆ ನಿಯಂತ್ರಿಸಬಹುದು ಗೊತ್ತೇ…?
ಬಿಸಿ ನೀರಿಗೆ ವಿನೆಗರ್ ಬೆರೆಸಿ ರಾತ್ರಿ ಮಲಗುವ ಮುನ್ನ ಅಡುಗೆ ಮನೆಯ ನೆಲದ ಮೇಲೆ ಸಿಂಪಡಿಸಿ ಬಿಡಿ. ಸಿಂಕ್ ಮತ್ತು ಕೊಳವೆಗಳಿಗೆ ಸುರಿಯಿರಿ. ಇದು ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ಸೋಂಕು ಹರಡುವುದನ್ನು ತಡೆಯುತ್ತದೆ.
ಅಡುಗೆ ಮನೆಯ ಸಿಂಕ್ ದುರ್ನಾತ ಬೀರುತ್ತಿದೆಯಾ….?
ಬಿಸಿ ನೀರಿಗೆ, ಒಂದು ಲಿಂಬೆಯ ರಸ ಮತ್ತು ಎರಡು ಚಮಚ ಬೇಕಿಂಗ್ ಸೋಡಾ ಬೆರೆಸಿ, ಸಿಂಕ್ ನಲ್ಲಿ ಸುರಿಯಿರಿ. ಅಡುಗೆಮನೆಯಲ್ಲಿ ಜಿರಳೆಗಳ ಸಂತಾನೋತ್ಪತ್ತಿಯನ್ನು ಇದು ತಡೆಯುತ್ತದೆ.
ಬೋರಿಕ್ ಆಮ್ಲಕ್ಕೆ ಸಕ್ಕರೆ ಬೆರೆಸಿ, ಜಿರಳೆ ಹೆಚ್ಚು ಕಾಣಿಸಿಕೊಳ್ಳುವ ಜಾಗದಲ್ಲಿ ಹರಡಿ. ಸೌತೆಕಾಯಿ, ಬೇವಿನ ಎಲೆಗಳು, ದಾಲ್ಚಿನಿ ಪುಡಿ ಕೂಡಾ ಬಗ್ ಹಾಗೂ ಜಿರಳೆಗಳನ್ನು ನಿಯಂತ್ರಿಸುವಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತವೆ.