ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಗಳಲ್ಲಿನ ಬ್ಲೂ ಲೈಟ್ ನಮ್ಮ ಕಣ್ಣಿಗೆ ಸಾಕಷ್ಟು ಸಮಸ್ಯೆಗಳನ್ನು ತರುತ್ತದೆ. ಇದರಿಂದ ಕಣ್ಣಿನ ದೃಷ್ಟಿಯ ಸಮಸ್ಯೆಯು ಕಾಣಿಸಿಕೊಳ್ಳಬಹುದು.
ಆದರೆ ಈ ಬ್ಲೂ ಲೈಟ್ ನಮ್ಮ ಚರ್ಮದ ಮೇಲೆ ಪ್ರಭಾವ ಬೀರುತ್ತದೆಯೇ? ಎಂಬ ಪ್ರಶ್ನೆ ಹಲವರಲ್ಲಿರಬಹುದು. ಇದಕ್ಕೆ ಉತ್ತರ ಇಲ್ಲಿದೆ.
ಬ್ಲೂ ಲೈಟ್ ನಮ್ಮ ದೃಷ್ಟಿ ಮೇಲೆ ಮಾತ್ರವಲ್ಲ ಇದು ನಮ್ಮ ಮೆದುಳು ಹಾಗೂ ಚರ್ಮದ ಮೇಲೂ ಪ್ರಭಾವ ಬೀರುತ್ತದೆ. ಇವು ಚರ್ಮಕ್ಕೆ ಹಾನಿಯುಂಟುಮಾಡುವಂತಹ ಫ್ರಿರಾಡಿಕಲ್ ಗಳ ರಚನೆಯನ್ನು ಉತ್ತೇಜಿಸುತ್ತದೆ. ಇದು ಕೆಂಪು, ಕಪ್ಪು ಕಲೆಗಳು ಮತ್ತು ಸುಕ್ಕುಗಳಿಗೆ ಕಾರಣವಾಗಬಹುದು.
ಯುವಿ ಕಿರಣಗಳಿಂದ ತ್ವಚೆಯನ್ನು ಕಾಪಾಡಲು ಈ ʼಆಹಾರʼ ಸೇವಿಸಿ
ಹಾಗಾಗಿ ನಿಮ್ಮ ದೇಹವನ್ನು ಬ್ಲೂ ಲೈಟ್ ಗೆ ಹೆಚ್ಚಾಗಿ ಒಡ್ಡಿಕೊಳ್ಳಬೇಡಿ. ಹಾಗೇ ಆ್ಯಂಟಿ ಆಕ್ಸಿಡೆಂಟ್ ಸೀರಮ್ ಗಳನ್ನು ಬಳಸಿ. ಇವು ಫ್ರಿ ರಾಡಿಕಲ್ ಗಳನ್ನು ನಿವಾರಿಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಸೂಕ್ಷ್ಮ ರೇಖೆಗಳನ್ನು ನಿವಾರಿಸುತ್ತದೆ. ಆದ ಕಾರಣ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿರುವ ವಿಟಮಿನ್ ಸಿ ಇರುವಂತಹ ಪದಾರ್ಥಗಳನ್ನು ಬಳಸಿ.