ಥೈರಾಯ್ಡ್ ಗೆ ಹಲಸಿನ ಹಣ್ಣು ಒಳ್ಳೆಯ ಮದ್ದು. ಹಲಸಿನ ಹಣ್ಣು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾರ್ಮೋನುಗಳನ್ನು ತಯಾರಿಸಲು ಮತ್ತು ಹೀರಿಕೊಳ್ಳಲು ಹಲಸಿನ ಹಣ್ಣು ಸಹಾಯ ಮಾಡುತ್ತದೆ. ಥೈರಾಯ್ಡ್ ನಿಂದ ಬಳಲುವವರು ಹಲಸಿನ ಹಣ್ಣಿನ ಸೇವನೆ ಮಾಡಬೇಕು.
ಥೈರಾಯ್ಡ್ ನಿಯಂತ್ರಣಕ್ಕೆ ಶುಂಠಿ ಕೂಡ ಒಳ್ಳೆಯದು. ಶುಂಠಿಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಇದ್ದು, ಇದು ಥೈರಾಯ್ಡ್ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಅಯೋಡಿನ್ ಯುಕ್ತ ಆಹಾರ ಸೇವಿಸುವ ಮೂಲಕ ಥೈರಾಯ್ಡ್ ನಿಯಂತ್ರಿಸಬಹುದು, ದೈನಂದಿನ ಆಹಾರದಲ್ಲಿ ಸಮುದ್ರ ಆಹಾರಗಳು, ಎಲೆಕೋಸು, ಕ್ಯಾರೆಟ್ ಮುಂತಾದವುಗಳನ್ನು ತಿನ್ನುವುದು ಒಳ್ಳೆಯದು.
ಥೈರಾಯ್ಡ್ ಸಮಸ್ಯೆಗಳಿಂದ ಹೊರಬರಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸೋರೆಕಾಯಿ ರಸವನ್ನು ಕುಡಿಯುವ ಅಭ್ಯಾಸವನ್ನು ಮಾಡಿ. ಸೋರೆಕಾಯಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ ನಂತ್ರ ಅರ್ಧ ಗಂಟೆ ಏನನ್ನೂ ತಿನ್ನಬೇಡಿ. ಕುಡಿಯಬೇಡಿ.
ಕ್ಯಾರೆಟ್‌ನಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟ್ಸ್ ಮತ್ತು ಬೀಟಾ ಕ್ಯಾರೊಟಿನ್ ಇದ್ದು, ಇವು ಥೈರಾಯ್ಡ್ ಗ್ರಂಥಿ ಸ್ರವಿಸುವ ಹಾರ್ಮೋನ್‌ಗಳನ್ನು ನಿಯಂತ್ರಿಸಲು ನೆರವಾಗುತ್ತವೆ. ಆದ್ದರಿಂದ ಪ್ರತಿದಿನ ಕ್ಯಾರೆಟ್ ಜ್ಯೂಸ್ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
ಸೇಬಿನಲ್ಲಿ ನಾರು ಮತ್ತು ಪೆಕ್ಟಿನ್ ಎಂಬ ಪೋಷಕಾಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಇವು ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಹಾಗೂ ಥೈರಾಯ್ಡ್ ಗ್ರಂಥಿಯ ಹಾರ್ಮೋನುಗಳನ್ನು ನಿಯಂತ್ರಿಸಲು ನೆರವಾಗುತ್ತವೆ. ಆದ್ದರಿಂದ ಆಗಾಗ ಸೇಬು ಹಣ್ಣುಗಳನ್ನು ಸೇವಿಸಿ.
ಕೊತ್ತಂಬರಿ ಸೊಪ್ಪಿನ ಜ್ಯೂಸ್ ಪ್ರತಿದಿನ ಕುಡಿಯುವುದರಿಂದಲೂ ಪ್ರಯೋಜನ ಪಡೆಯಬಹುದು.
ಜೊತೆ ಜೊತೆಗೆ ಕತ್ತಿಗೆ ಸಂಬಂಧಿಸಿದ ಕೆಲ ವ್ಯಾಯಾಮ ನಿಮಿತವಾಗಿ ಮಾಡುವುದರಿಂದಲೂ ʼಥೈರಾಯ್ಡ್ʼ ನಿಯಂತ್ರಣ ಸಾಧ್ಯ.