ಬೇಕಾಗುವ ಪದಾರ್ಥಗಳು : ಕ್ಯಾರೆಟ್ – 3, ಬೀಟ್ರೂಟ್ – 2, ಆಲೂಗಡ್ಡೆ – 3, ಹಸಿಬಟಾಣಿ – 1/4 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ – 1, ತುರಿದ ಹಸಿಶುಂಠಿ – 1 ಚಮಚ, ದುಂಡಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ – 3, ಜೀರಿಗೆ – 1 ಚಮಚ, ಖಾರದ ಪುಡಿ – 5 ಚಮಚ, ಒಣದ್ರಾಕ್ಷಿ – 2 ಚಮಚ, ಹುರಿದು ಪುಡಿ ಮಾಡಿದ ಕಡಲೆಬೀಜದ ಪುಡಿ – 2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕಾರ್ನ್ ಫ್ಲೋರ್ – 5 ಚಮಚ, ಬ್ರೆಡ್ ಪುಡಿ – 1 ಕಪ್, ಕರಿಯಲು ಎಣ್ಣೆ.
ಮಾಡುವ ವಿಧಾನ : ಕ್ಯಾರೆಟ್, ಬೀಟ್ ರೂಟ್, ಆಲೂಗಡ್ಡೆಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು, ಬೇಯಿಸಿ ಬೆಂದ ತರಕಾರಿಗಳನ್ನು ಸ್ಮ್ಯಾಶ್ ಮಾಡಿಕೊಂಡು ಅದಕ್ಕೆ ಬಟಾಣಿಯನ್ನು ಬೆರೆಸಿ, ಬಳಿಕ ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿಯನ್ನು ಕೆಂಪಗೆ ಹುರಿಯಿರಿ. ಅದಕ್ಕೆ ದುಂಡಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ, ಒಣದ್ರಾಕ್ಷಿ, ನೆಲಗಡಲೆ ಪುಡಿ ಸೇರಿಸಿ ಹುರಿದುಕೊಳ್ಳಿ. ಇದಕ್ಕೆ ಜೀರಿಗೆ ಪುಡಿ, ಉಪ್ಪು, ಮೆಣಸಿನಪುಡಿ ಬೆರೆಸಿ ಹೂರಣ ಸಿದ್ಧ ಮಾಡಿಕೊಳ್ಳಿ.
ಆರೋಗ್ಯಕ್ಕಾಗಿ ಜೀರಿಗೆ ಸೇವನೆ ಹೇಗಿರಬೇಕು ಗೊತ್ತಾ…?
ಕಾರ್ನ್ ಫ್ಲೋರ್ ಗೆ ಸ್ವಲ್ಪ ನೀರು ಹಾಗೂ ಉಪ್ಪು ಸೇರಿಸಿ ಗಂಟಾಗದಂತೆ ಪೇಸ್ಟ್ ತಯಾರಿಸಿಕೊಳ್ಳಿ. ಹೂರಣ ಮಿಶ್ರಣವನ್ನು ಉಂಡೆ ಕಟ್ಟಿ ಮೇಲೆ ಹೇಳಿದಂತೆ ತಯಾರಿಸಿದ ಪೇಸ್ಟ್ ನಲ್ಲಿ ಅದ್ದಿ ಬ್ರೆಡ್ ಪುಡಿಯಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಹಾಕಿ ಗರಿಗರಿಯಾಗಿ ಕರಿದು ತೆಗೆಯಿರಿ.