ಮಕ್ಕಳು ಸ್ನ್ಯಾಕ್ಸ್ ಇಷ್ಟಪಡ್ತಾರೆ. ಅದ್ರಲ್ಲೂ ಹೊಸ ಹೊಸ ಬಗೆಯ ತಿಂಡಿಗಳೆಂದ್ರೆ ಅವರಿಗೆ ಪ್ರಾಣ. ನಿಮ್ಮ ಮಕ್ಕಳೂ ನಿಮಗೆ ಹೊಸ ರುಚಿಯ ತಿಂಡಿಬೇಕೆಂದು ಪೀಡಿಸ್ತಾ ಇದ್ದರೆ ವೆಜ್ ಗೋಲ್ಡ್ ಕಾಯಿನ್ ಮಾಡಿ ಕೊಡಿ. ನಿಮ್ಮ ರೆಸಿಪಿ ಬುಕ್ ಗೆ ಈ ಹೊಸ ಸ್ನ್ಯಾಕ್ಸ್ ಸೇರಿಸಿಕೊಳ್ಳಿ.
ವೆಜ್ ಗೋಲ್ಡ್ ಕಾಯಿನ್ ಮಾಡಲು ಬೇಕಾಗುವ ಪದಾರ್ಥಗಳು:
2 ಬ್ರೆಡ್ಡಿನ ಚೂರು
½ ಕಪ್ ಬೇಯಿಸಿದೆ ತರಕಾರಿ (ಹೂಕೋಸು, ಕೋಸು, ಬೀನ್ಸ್)
1 ಚಮಚ ಕಾರ್ನ್ಫ್ಲೂರ್
1 ಬೇಯಿಸಿದ ಆಲೂಗಡ್ಡೆ
2 ಕತ್ತರಿಸಿದ ಹಸಿ ಮೆಣಸು
ಸ್ವಲ್ಪ ಬಿಳಿ ಎಳ್ಳು ಹಾಗೂ ಪೆಪ್ಪರ್ ಪೌಡರ್
ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಯಲು ಎಣ್ಣೆ
ವೆಜ್ ಗೋಲ್ಡ್ ಕಾಯಿನ್ ಮಾಡುವ ವಿಧಾನ:
ಒಂದು ಪಾತ್ರೆಗೆ ಬೇಯಿಸಿದ ತರಕಾರಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಉಪ್ಪು, ಪೆಪ್ಪರ್ ಪೌಡರ್, ಕಾರ್ನ್ಫ್ಲೋರ್, ಹಸಿ ಮೆಣಸನ್ನು ಹಾಕಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಒಂದು ಬ್ರೆಡ್ ಚೂರಿನ ಮೇಲಿಟ್ಟು ಇನ್ನೊಂದು ಬ್ರೆಡ್ ಪೀಸನ್ನು ಕವರ್ ಮಾಡಿ. ನಂತ್ರ ಅದರ ಮೇಲೆ ಬಿಳಿ ಎಳ್ಳನ್ನು ಉದುರಿಸಿ.
ಒಂದು ಪ್ಯಾನ್ ಗೆ ಎಣ್ಣೆಯನ್ನು ಹಾಕಿ. ಈ ಬ್ರೆಡ್ ಮಿಶ್ರಣವನ್ನು ಎಣ್ಣೆಯಲ್ಲಿ ಗರಿಗರಿಯಾಗುವವರೆಗೆ ಫ್ರೈ ಮಾಡಿ.
ನಂತ್ರ ಎಣ್ಣೆ ಬಸಿದು, ಸಾಸ್ ಜೊತೆ ಮಕ್ಕಳಿಗೆ ತಿನ್ನಲು ಕೊಡಿ.