ಮೊಳಕೆ ಬಂದ ಹೆಸರುಕಾಳು – 1/2 ಕಪ್
ಮೊಳಕೆ ಬಂದ ಮಡಕೆಕಾಳು – 1/2 ಕಪ್
ಉದ್ದಿನ ಬೇಳೆ – 1/2 ಕಪ್
ಕಡಲೆ ಬೇಳೆ – 3 ಚಮಚ
ಕತ್ತರಿಸಿದ ಮೆಂತ್ಯೆ ಸೊಪ್ಪು – 3 ಚಮಚ
ಕತ್ತರಿಸಿದ ಕೊತ್ತಂಬರಿ ಸೊಪ್ಪು – 3 ಚಮಚ
ಕತ್ತರಿಸಿದ ಪುದೀನಾ ಸೊಪ್ಪು – 2 ಚಮಚ
ಅಚ್ಚ ಖಾರದ ಪುಡಿ – 3 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಸಣ್ಣಗೆ ಕತ್ತರಿಸಿದ ತೆಂಗಿನಕಾಯಿ ತುಂಡುಗಳು – 1/2 ಕಪ್
ಎಣ್ಣೆ – ಕರಿಯಲು
ಮಾಡುವ ವಿಧಾನ:
ಕಾಳುಗಳು ಹಾಗೂ ಬೇಳೆಗಳನ್ನು ಆರು ಗಂಟೆ ನೆನೆಯಲು ಬಿಡಬೇಕು. ಬಳಿಕ ನೀರನ್ನು ಬಸಿದು ಗಟ್ಟಿಯಾಗಿ ಮಿಕ್ಸಿಯಲ್ಲಿ ಅರೆಯಬೇಕು. ಅರೆದ ಮಿಶ್ರಣಕ್ಕೆ ಕತ್ತರಿಸಿದ ಸೊಪ್ಪುಗಳು, ಉಪ್ಪು, ಖಾರದ ಪುಡಿ, ತೆಂಗಿನಕಾಯಿ ತುಂಡುಗಳನ್ನು ಸೇರಿಸಿ ಒಂದು ಗಂಟೆಗಳ ಕಾಲ ನೆನೆಯಲು ಬಿಡಬೇಕು.
ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಮಾಡಿ ವಡೆಯಾಕಾರದಲ್ಲಿ ತಟ್ಟಿ ಕಾಯಿಸಿದ ಎಣ್ಣೆಯಲ್ಲಿ ಕರಿದರೆ ರುಚಿಯಾದ ಮೊಳಕೆ ಕಾಳುಗಳ ವಡೆ ಸವಿಯಲು ಸಿದ್ಧ. ಕಾಯಿ ಚಟ್ನಿಯೊಂದಿಗೆ ಈ ವಡೆಯನ್ನು ತಿನ್ನಲು ಬಲು ರುಚಿಯಾಗಿರುತ್ತದೆ.