alex Certify ಮಾಡಿ ನೋಡಿ ರುಚಿಯಾದ ʼರವೆ ವಡೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಡಿ ನೋಡಿ ರುಚಿಯಾದ ʼರವೆ ವಡೆʼ

ವಡೆಗಳಲ್ಲಿ ಹಲವು ವಿಧ, ಬಲ್ಲವನೇ ಬಲ್ಲ… ವಡೆ ರುಚಿಯ. ನಿಮಗಾಗಿ ರವೆ ವಡೆ ಬಗ್ಗೆ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ರವೆ- ಅರ್ಧ ಕೆಜಿ, ಹಸಿ ಮೆಣಸಿನಕಾಯಿ- 8, ಈರುಳ್ಳಿ- 4, ತೆಂಗಿನಕಾಯಿ ತುರಿ- ಅರ್ಧ ಕಪ್, ಅಡಿಗೆ ಸೋಡಾ- 1 ಚಮಚ, ಮೊಸರು- ಕಾಲು ಲೀಟರ್, ಕೊತಂಬರಿ ಸೊಪ್ಪು- 1 ಕಟ್ಟು, ಉಪ್ಪು- ರುಚಿಗೆ ತಕ್ಕಂತೆ, ತುಪ್ಪ- ಕಾಲು ಕೆಜಿ.

ಮಾಡುವ ವಿಧಾನ: ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಸ್ವಲ್ಪ ಉರಿದುಕೊಂಡು, ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಈರುಳ್ಳಿ, ಕೊತಂಬರಿ ಸೊಪ್ಪು, ಹಸಿ ಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿ ಹಾಕಿ ಮಿಶ್ರಣ ಮಾಡಿ.

ನಂತರ ಈ ಮಿಶ್ರಣಕ್ಕೆ ಅಡಿಗೆ ಸೋಡಾ, ಉಪ್ಪು, ತೆಂಗಿನತುರಿ, ಮೊಸರು ಹಾಕಿ ಗಟ್ಟಿಯಾಗಿ ಕಲೆಸಿಕೊಂಡು ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಒಲೆ ಮೇಲೆ ಬಾಣಲೆ ಇಟ್ಟು, ಅದಕ್ಕೆ ತುಪ್ಪ ಹಾಕಿರಿ. ತುಪ್ಪ ಕಾದ ನಂತರ ಈ ಮೊದಲೇ ಮಾಡಿಟ್ಟುಕೊಂಡಿರುವ ಉಂಡೆಗಳನ್ನು ತಟ್ಟಿ ಹಾಕಿರಿ. ಚೆನ್ನಾಗಿ ಕಾದ ನಂತರ ಬಾಣಲೆಯಿಂದ ಹೊರತೆಗೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...