ಹೆಚ್ಚಿನ ನಾನ್ ವೆಜ್ ಪ್ರಿಯರು ಭಾನುವಾರ ಸಾಮಾನ್ಯವಾಗಿ ಮಾಂಸದ ಅಡುಗೆ ಇಷ್ಟಪಡುತ್ತಾರೆ. ಭಾನುವಾರದ ಬಿಡುವಿನಲ್ಲಿ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಮಟನ್ ಮಸಾಲ ಚಾಪ್ಸ್ ಕುರಿತ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
½ ಕೆ.ಜಿ. ಮಟನ್, 200 ಗ್ರಾಂ ಈರುಳ್ಳಿ, 200 ಗ್ರಾಂ ಟೊಮ್ಯಾಟೊ, 200 ಗ್ರಾಂ ಗಟ್ಟಿ ಮೊಸರು, ½ ಸ್ಪೂನ್ ಮೆಣಸಿನಕಾಯಿ ಪುಡಿ, ½ ಸ್ಪೂನ್ ಗರಂ ಮಸಾಲ, ½ ಸ್ಪೂನ್ ಧನಿಯಾ, ಜೀರಿಗೆ ಪುಡಿ, 2 ಹಸಿಮೆಣಸಿನ ಕಾಯಿ, 1 ಇಂಚು ಶುಂಠಿ, 1 ಬೆಳ್ಳುಳ್ಳಿ, 100 ಗ್ರಾಂ ವನಸ್ಪತಿ, ½ ಸ್ಪೂನ್ ಅರಿಶಿಣ.
ತಯಾರಿಸುವ ವಿಧಾನ:
ಚಾಪ್ಸ್ ಶುದ್ಧ ಮಾಡಿ ತೊಳೆದು ಇಟ್ಟುಕೊಳ್ಳಿ. ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ ಮತ್ತು ಶುಂಠಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಮೊಸರನ್ನು ಕಡೆದು, ಟೊಮ್ಯಾಟೊ ಕತ್ತರಿಸಿಕೊಳ್ಳಿ. ವನಸ್ಪತಿಯನ್ನು ಕಾಯಿಸಿದ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಸ್ವಲ್ಪ ಸಮಯ ಹುರಿದುಕೊಳ್ಳಿ.
ಅದಕ್ಕೆ ಟೊಮ್ಯಾಟೊ, ಮೊಸರು, ಮೆಣಸಿನಕಾಯಿ ಪುಡಿ, ಧನಿಯಾ ಜೀರಿಗೆ ಪುಡಿ ಹಾಕಿರಿ. ಟೊಮ್ಯಾಟೊ ಗೊಜ್ಜಿನ ರೀತಿ ಆದ ನಂತರ ಅದಕ್ಕೆ ಮಟನ್ ಚಾಪ್ಸ್ ಬೆರೆಸಿ ಉಪ್ಪು ಹಾಕಿ ಟೊಮ್ಯಾಟೊ ಹುರಿಯಿರಿ.
ಚಾಪ್ಸ್ ಕಂದು ಬಣ್ಣಕ್ಕೆ ತಿರುಗಿದಾಗ, ಅದಕ್ಕೆ ಅಗತ್ಯವಿರುವಷ್ಟು, ನೀರು ಹಾಕಿ ಬೇಯಿಸಿ. ಬೆಂದ ಬಳಿಕ ಗರಂ ಮಸಾಲೆ ಮತ್ತು ಕೊತಂಬರಿ ಸೊಪ್ಪು ಹಾಕಿ ಕೆಳಗೆ ಇಳಿಸಿ. ಬಿಸಿಯಾಗಿರುವಾಗಲೇ ಬಡಿಸಿರಿ.