ಬೇಕಾಗುವ ಸಾಮಗ್ರಿಗಳು : ಮಟನ್ – 2 ಕೆ ಜಿ, ಗೇರು ಬೀಜ – 50 ಗ್ರಾಂ, ಎಣ್ಣೆ – ಕರಿಯಲು, ಲವಂಗ 8 – 10, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ – 4, ಬೆಳ್ಳುಳ್ಳಿ – 1, ನಿಂಬೆಹಣ್ಣು – 1, ಏಲಕ್ಕಿ- 1, ಪಾಲಕ್ ಸೊಪ್ಪು – 2 ಕಟ್ಟು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಪುದೀನ – ಸ್ವಲ್ಪ, ಅರಿಶಿನ ಪುಡಿ, ಗರಂ ಮಸಾಲ, ಮೆಣಸು – 3, ತೆಂಗಿನ ತುರಿ – 2 ಚಮಚ, ದಾಲ್ಚಿನ್ನಿ – 1 ತುಂಡು, ದಾಲ್ಚಿನ್ನಿ ಎಲೆ – 1, ಜೀರಿಗೆ – 1ಚಮಚ, ಸೋಂಪಿನ ಕಾಳು – ಅರ್ಧ ಚಮಚ, ಉಪ್ಪು- ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಮಟನ್ ಪೀಸ್ ಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ, ಮೆಣಸು, ತೆಂಗಿನತುರಿ, ಜೀರಿಗೆ, ಗೇರುಬೀಜವನ್ನು ಚೆನ್ನಾಗಿ ಹುರಿದುಕೊಳ್ಳಿ, ಪಾಲಕ್ ಸೊಪ್ಪು ಬೇಯಿಸಿ ನೀರು ಬಸಿದು ಕೊಳ್ಳಿ. ನಂತರ ಹುರಿದ ಸಾಮಗ್ರಿಗಳನ್ನು ಹಾಗೂ ಲವಂಗ, ದಾಲ್ಚಿನ್ನಿ, ಏಲಕ್ಕಿ, ಬೆಳ್ಳುಳ್ಳಿ ಸ್ವಲ್ಪ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಅದು ಸ್ವಲ್ಪ ನಯವಾದಾಗ ಪಾಲಕ್ ಸೊಪ್ಪು, ಗೇರು ಬೀಜ ಹಾಕಿ ಪೇಸ್ಟ್ ರೀತಿ ರುಬ್ಬಿಕೊಳ್ಳಿ.
ನಂತರ ಕುಕ್ಕರ್ ನಲ್ಲಿ 1 ಸಣ್ಣ ಕಪ್ ಎಣ್ಣೆ ಹಾಕಿ ಕಾಯಿಸಿ, ಕತ್ತರಿಸಿಟ್ಟ ಈರುಳ್ಳಿಯನ್ನು ಕೆಂಪಗೆ ಹುರಿಯಿರಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ತೊಳೆದಿಟ್ಟ ಮಟನ್ ಹಾಕಿ ಮಿಕ್ಸ್ ಮಾಡಿ ಬೇಯಲು ಇಡಿ. ಗರಂ ಮಸಾಲ, ಅರಿಶಿನ ಪುಡಿ, ಉಪ್ಪು ಹಾಕಿ ಕಲೆಸಿ ಕುಕ್ಕರ್ ನ ಮುಚ್ಚಳ ಮುಚ್ಚಿ. 5-6 ವಿಷಲ್ ಬಂದ ನಂತರ ಗ್ಯಾಸ್ ಆಫ್ ಮಾಡಿ. ಕುಕ್ಕರ್ ಆರಿದ ನಂತರ ರುಬ್ಬಿಕೊಂಡ ಮಸಾಲ ಹಾಕಿ ಸ್ವಲ್ಪ ಕುದಿಸಿ ನಿಂಬೆ ರಸ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಈಗ ಮಟನ್ ಗ್ರೀನ್ ಮಸಾಲ ಸವಿಯಲು ಸಿದ್ಧ.