ಮುಸುಕಿನ ಜೋಳದ ರುಚಿಯನ್ನು ಬಲ್ಲವರೇ ಬಲ್ಲರು. ಹಾಲುಗಾಳಿನ ಜೋಳ ಮತ್ತು ಸುಟ್ಟ ತೆನೆಯ ಜೋಳವನ್ನು ಸೀಸನ್ ನಲ್ಲಿ ತಿನ್ನದವರೇ ಇರಲಾರರು. ಇಂತಹ ಮುಸುಕಿನ ಜೋಳದಿಂದ ದೋಸೆ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಮುಸುಕಿನ ಜೋಳದ ಹಿಟ್ಟು -1 ಕೆ.ಜಿ., ಉಪ್ಪು -2 ಚಮಚ, ಮಸಾಲೆ ಪುಡಿ -50 ಗ್ರಾಂ, ಖಾರದ ಪುಡಿ -5 ಚಮಚ, ಜೀರಿಗೆ -25 ಗ್ರಾಂ, ಅರಿಶಿಣ -1 ಚಮಚ, ನೀರು -2 ಲೀಟರ್, ಎಣ್ಣೆ -250 ಗ್ರಾಂ.
ತಯಾರಿಸುವ ವಿಧಾನ:
ಅಗಲವಾದ ಸ್ಟೀಲ್ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲೆಸಿರಿ.
ತೆಳುವಾಗಿ ದೋಸೆ ಹಿಟ್ಟನ್ನು ಮಾಡಿಕೊಂಡು, ಅಗಲವಾದ ಕಾವಲಿಯನ್ನು ಸ್ಟವ್ ಮೇಲೆ ಇಟ್ಟು ಬಿಸಿ ಮಾಡಿರಿ. ಸೌಟಿನಿಂದ ಹಿಟ್ಟು ತೆಗೆದುಕೊಂಡು ತೆಳುವಾಗಿ ದೋಸೆಯನ್ನು ಹಾಕಿರಿ.
ಚಮಚದಿಂದ ಎಣ್ಣೆಯನ್ನು ಹಾಕಿ ಬೇಯಿಸಿ. ಎರಡೂ ಬದಿಯಲ್ಲಿ ಬೆಂದ ಬಳಿಕ ದೋಸೆಯನ್ನು ಕಾವಲಿಯಿಂದ ತೆಗೆದು ತಟ್ಟೆಗೆ ಹಾಕಿರಿ. ಖಾರದ ಚಟ್ನಿ ಇಲ್ಲವೇ ಆಲೂಪಲ್ಯದೊಂದಿಗೆ ಸೇವಿಸಿ.