ಬಿಸಿಬಿಸಿ ದೋಸೆಯೊಂದಿಗೆ ಆಲೂಗಡ್ಡೆ ಪಲ್ಯ, ಚಟ್ನಿ ಮಾತ್ರ ತಿಂದು ರೂಢಿಯಿರುವ ದೋಸೆ ಪ್ರಿಯರಿಗೆ ಹೊಸ ರುಚಿಯ ಚಿಕನ್ ಮಸಾಲ ದೋಸೆ ಇಷ್ಟವಾಗುತ್ತದೆ.
ಈ ದೋಸೆಯ ವಿಶೇಷವೆಂದರೆ ಬ್ರೇಕ್ ಫಾಸ್ಟ್ ಗೆ ಮಾತ್ರವಲ್ಲ, ಲಂಚ್ ಮತ್ತು ಡಿನ್ನರ್ ಗೂ ಸೇವಿಸಬಹುದು.
ಕ್ರಿಸ್ಪಿ ಮಸಾಲೆ ದೋಸೆಯೊಳಗೆ ಆಲೂ ಪಲ್ಯದ ಬದಲು ಚಿಕನ್ ಪಲ್ಯ ಇರುತ್ತದೆ. ಇದನ್ನು ಚಿಕನ್ ಸ್ಟಫಿಂಗ್ ಮಸಾಲ ದೋಸೆ ಎಂದೂ ಕರೆಯಲಾಗುತ್ತದೆ.
ಚಿಕನ್ ಮಸಾಲಗೆ ಏನೆಲ್ಲಾ ಬೇಕು
ಚಿಕನ್ ಚೂರುಗಳು – 1 ಬೌಲ್
ಈರುಳ್ಳಿ – 2 ಹೆಚ್ಚಿದ್ದು
ಮೆಣಸಿನಕಾಯಿ – 5
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಅರಿಶಿನ ಪುಡಿ – ಸ್ವಲ್ಪ
ಗರಂ ಮಸಾಲಾ – ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಎಣ್ಣೆ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು.
ರುಚಿಕರವಾದ ಚಿಕನ್ ಚಾಪ್ಸ್
ಮಾಡುವ ವಿಧಾನ
ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಚಿಕನ್ ಚೂರುಗಳು, ಅರಿಶಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲಾ ಮತ್ತು ಉಪ್ಪು ಹಾಕಿ 15 ನಿಮಿಷಗಳ ಕಾಲ ಬೇಯಿಸಿ. ಅಂತಿಮವಾಗಿ ಕೊತ್ತಂಬರಿ ಸೊಪ್ಪು ಸಿಂಪಡಿಸಿ ಪಕ್ಕಕ್ಕೆ ಇರಿಸಿ.
ಮಸಾಲ ದೋಸೆ ಮಾಡುವುದು ಹೇಗೆ
3-4 ಗಂಟೆಗಳ ಕಾಲ ಉದ್ದಿನ ಬೇಳೆ, ಅಕ್ಕಿ, ಚನಾ ಧಾಲ್ ಮತ್ತು ಮೆಂತ್ಯೆ ಬೀಜಗಳನ್ನು ನೆನೆಸಿ ರುಬ್ಬಿಕೊಳ್ಳಬೇಕು. ನಂತರ ದೋಸೆ ಮಾಡುವಾಗ ಆಲೂ ಪಲ್ಯದ ಬದಲು ಈ ಚಿಕನ್ ಮಸಾಲ ಸ್ಟಫಿಂಗ್ ಹಾಕಿ ಸರ್ವ್ ಮಾಡಿ. ಈಗ ರುಚಿ ರುಚಿಯಾದ ಚಿಕನ್ ಮಸಾಲ ದೋಸೆ ಸವಿಯಲು ಸಿದ್ಧ.