ಸದ್ಯ ಉರಿ ಉರಿ ಬೇಸಿಗೆ. ಈ ಧಗೆಯಲ್ಲಿ ತಣ್ಣನೆಯ ಕಬ್ಬಿನ ಹಾಲು ಕುಡಿದರೆ ಮನಸ್ಸಿಗೂ ಖುಷಿ, ದೇಹಕ್ಕೂ ಒಳ್ಳೆಯದು. ಕಬ್ಬಿನ ಹಾಲಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ.
ಕಿಡ್ನಿ ಆರೋಗ್ಯಕ್ಕೆ ಇದು ತುಂಬಾನೇ ಒಳ್ಳೆಯದು. ಜೊತೆಗೆ ಲಿವರ್ ಗೆ ಕೂಡ. ಅಲ್ಲದೇ ಜಾಂಡೀಸ್ ಗೆ ಇದು ರಾಮಬಾಣ. ಹಾಗಿದ್ರೆ ಕಬ್ಬಿನ ಜ್ಯೂಸ್ ಅನ್ನು ಮನೆಯಲ್ಲೇ ಹೇಗೆ ತಯಾರಿಸೋದು ಅನ್ನೋದನ್ನು ನೋಡೋಣ.
ಬೇಕಾಗುವ ಸಾಮಗ್ರಿ :
ಮಧ್ಯಮ ಗಾತ್ರದ ಕಬ್ಬು
ನೀರು
ಜಾಳಿಗೆ ಅಥವಾ ಸೋಸುವ ಬಟ್ಟೆ
ಶುಂಠಿ (ಬೇಕಾದಲ್ಲಿ)
ಲಿಂಬು (ಬೇಕಾದಲ್ಲಿ)
ಪುದೀನಾ ಸೊಪ್ಪು
ಕಾಳುಮೆಣಸು
ಐಸ್ ಕ್ಯೂಬ್
ಮಾಡುವ ವಿಧಾನ :
ಮೊದಲು ಕಬ್ಬನ್ನು ಸ್ವಚ್ಛಮಾಡಿ, ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಕೊಳ್ಳಿ. ಅದನ್ನು ನುಣ್ಣಗೆ ಗ್ರೈಂಡ್ ಮಾಡಿ. ಬಳಿಕ ಅದನ್ನು ಸೋಸಿ ಜ್ಯೂಸ್ ತೆಗೆಯಿರಿ. ಇದಾದ ಬಳಿಕ ಬೇಕಾದಲ್ಲಿ ಶುಂಠಿ, ಲಿಂಬು, ಪುದೀನಾ ಅಥವಾ ಕಾಳುಮೆಣಸಿನ ಪುಡಿ ಹಾಕಿ. ಹಾಗೆಯೇ ಕುಡಿದರೂ ಇದು ಬಹಳ ರುಚಿ. ಕೊನೆಯಲ್ಲಿ ಐಸ್ ಕ್ಯೂಬ್ ನೊಂದಿಗೆ ತಣ್ಣನೆಯ ಜ್ಯೂಸ್ ಅನ್ನು ಸರ್ವ್ ಮಾಡಿ.