ಸಂಜೆ ವೇಳೆಗೆ ಬಿಸಿ ಬಿಸಿ ಟೀ ಜೊತೆ ರುಚಿ ರುಚಿ ಸ್ನ್ಯಾಕ್ಸ್ ಯಾರಿಗೆ ಇಷ್ಟವಾಗಲ್ಲ. ಪಕೋಡಾ, ಗೋಬಿ ತಿಂದು ಬೋರ್ ಆಗಿದ್ರೆ ಈ ಸಂಜೆ ಪೋಟಾಟೋ ಬಾಲ್ಸ್ ಟ್ರೈ ಮಾಡಿ. ರುಚಿಯೊಂದೇ ಅಲ್ಲ ಇದನ್ನು ಮಾಡೋದು ತುಂಬಾ ಸುಲಭ.
ಪೋಟಾಟೋ ಸೂಜಿ ಬಾಲ್ಸ್ ಮಾಡಲು ಬೇಕಾಗುವ ಸಾಮಾಗ್ರಿ:
ರವೆ – 1 ಕಪ್
ಮೊಸರು – ½ ಕಪ್
ಓಂಕಾಳು -1 ಚಮಚ
ಆಲೂಗಡ್ಡೆ -1 ಕಪ್ ( ಬೇಯಿಸಿದ)
ಈರುಳ್ಳಿ – 1 ಕಪ್ ( ಕತ್ತರಿಸಿದ್ದು)
ಹಸಿ ಮೆಣಸಿನ ಕಾಯಿ -1 ಚಮಚ ( ಸಣ್ಣಗೆ ಕತ್ತರಿಸಿದ್ದು)
ಶುಂಠಿ -1 ಚಮಚ ( ಕತ್ತರಿಸಿದ್ದು)
ಬೆಳ್ಳುಳ್ಳಿ -1 ಚಮಚ (ಕತ್ತರಿಸಿದ್ದು)
ಚಾಟ್ ಮಸಾಲಾ -1 ಚಮಚ
ಕೆಂಪು ಮೆಣಸಿನ ಪುಡಿ -1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ –ಅಗತ್ಯಕ್ಕೆ ತಕ್ಕಷ್ಟು
ಮೊಸರು ಹಾಗೂ ಒಣದ್ರಾಕ್ಷಿ ಈ ರೀತಿ ಸೇವಿಸಿದರೆ ಸಿಗುತ್ತೆ ಆರೋಗ್ಯ ಭಾಗ್ಯ
ಪೋಟಾಟೋ ಬಾಲ್ಸ್ ಮಾಡುವ ವಿಧಾನ :
ಮೊದಲು ಒಂದು ಪಾತ್ರೆಗೆ ರವೆ ಹಾಗೂ ಮೊಸರನ್ನು ಹಾಕಿ ಚೆನ್ನಾಗಿ ಕಲಸಿ 30 ನಿಮಿಷ ಹಾಗೆ ಇಡಿ.
30 ನಿಮಿಷದ ನಂತ್ರ ರವೆ-ಮೊಸರು ಮಿಶ್ರಣಕ್ಕೆ ಆಲೂಗಡ್ಡೆ, ಓಂಕಾಳು, ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಚಾಟ್ ಮಸಾಲಾ, ಮೆಣಸಿನ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ.
ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ಮೇಲೆ ರವೆ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಕರಿಯಿರಿ. ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬಂದ ನಂತ್ರ ಉಂಡೆಯನ್ನು ತೆಗೆದು ಸರ್ವ್ ಮಾಡಿ.