ಮೆಣಸಿನ ಸಾರಿನ ರುಚಿಯನ್ನು ಬಲ್ಲವರೇ ಬಲ್ಲವರು. ಹಿಂದೆಲ್ಲಾ ಶೀತವಾದ ಸಂದರ್ಭದಲ್ಲಿ ಮೆಣಸಿನ ಸಾರನ್ನು ಮಾಡಿಕೊಡಲಾಗುತ್ತಿತ್ತು.
ಬೇಕಾಗುವ ಪದಾರ್ಥಗಳು:
12 ಮೆಣಸಿನ ಕಾಳು, 1 ಚಮಚ ಜೀರಿಗೆ, ಕರಿಬೇವು, ಕೊತಂಬರಿ ಸೊಪ್ಪು, 1 ಚಮಚ ಸಾಸಿವೆ. 1 ಚಮಚ ತುಪ್ಪ, ಗೋಲಿ ಗಾತ್ರದ ಹುಣಸೇಹಣ್ಣು.
ತಯಾರಿಸುವ ವಿಧಾನ:
ಹುಣಸೆ ಹಣ್ಣನ್ನು ಚೆನ್ನಾಗಿ ತೊಳೆದು ಬಿಸಿ ನೀರಿನಲ್ಲಿ ನೆನೆಹಾಕಿ. ನಂತರ ಮೆಣಸು ಹಾಗೂ ಜೀರಿಗೆಯನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ.
ಪಾತ್ರೆಯನ್ನು ಒಲೆಯ ಮೇಲಿಟ್ಟು ತುಪ್ಪದಲ್ಲಿ ಸಾಸಿವೆ ಸಿಡಿಸಿರಿ. ಬಳಿಕ ಜೀರಿಗೆ ಮೆಣಸು ಪುಡಿ, ಇಂಗು ಹಾಕಿರಿ. ನಂತರದಲ್ಲಿ ಕರಿಬೇವು, ಕೊತಂಬರಿ ಸೊಪ್ಪು ಹಾಗೂ ಹುಣಸೇ ಹುಳಿಯನ್ನು ಹಾಕಿರಿ.
ನೀರು ಸೇರಿಸಿ ಕುದಿಸಿರಿ. ಚೆನ್ನಾಗಿ ಕುದಿಸಿದ ಬಳಿಕ ಉಪ್ಪನ್ನು ಹಾಕಿ ಕೆಳಗೆ ಇಳಿಸಿರಿ. ಬೇಕಾದರೆ ಚೂರು ಬೆಲ್ಲವನ್ನು ಹಾಕಿ.