ಈರುಳ್ಳಿ ಮಸಾಲೆ ಸಬ್ಜಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಅನ್ನ ಅಥವಾ ಪರೋಟಾಕ್ಕೆ ಇದು ಹೇಳಿ ಮಾಡಿಸಿದ್ದು.
ಈರುಳ್ಳಿ ಮಸಾಲೆ ಸಬ್ಜಿ ಮಾಡಲು ಬೇಕಾಗುವ ಪದಾರ್ಥಗಳು:
15-20 ಸಣ್ಣ ಈರುಳ್ಳಿ
ಒಂದು ಚಮಚ ಸೋಂಪು ( ಹುಡಿ ಮಾಡಿದ್ದರೆ ಒಳ್ಳೆಯದು), ಜೀರಿಗೆ, ಇಂಗು
ಎರಡು ಹಸಿ ಮೆಣಸಿನ ಕಾಯಿ, ಸಣ್ಣಗೆ ಹೆಚ್ಚಿದ ದೊಡ್ಡ ಶುಂಠಿ
ಒಂದು ಚಮಚ ಕೆಂಪು ಮೆಣಸಿನ ಪುಡಿ
ಒಂದು ಚಮಚ ಮಾವಿನ ಪುಡಿ
ಒಂದು ಚಮಚ ಕೊತ್ತಂಬರಿ ಪುಡಿ, ಸುವಾಸನೆಗೆ ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು, ಸಬ್ಜಿ ತಯಾರಿಸಲು ಎಣ್ಣೆ
ರುಚಿಯಾದ ‘ಕ್ಯಾಬೇಜ್ ರೈಸ್ ಬಾತ್’
ಈರುಳ್ಳಿ ಮಸಾಲೆ ಸಬ್ಜಿ ಮಾಡುವ ವಿಧಾನ:
ಈರುಳ್ಳಿಯ ಸಿಪ್ಪೆ ತೆಗೆದು ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ
ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಬಿಡಿ. ಅದು ಕಾದ ನಂತರ ಜೀರಿಗೆ, ಇಂಗು ಹಾಗೂ ಸೋಂಪನ್ನು ಹಾಕಿ.
ನಂತರ ಹಸಿ ಮೆಣಸು, ಈರುಳ್ಳಿ ಹಾಗೂ ಶುಂಠಿಯನ್ನು ಹಾಕಿ.
ಇದಕ್ಕೆ ತಕ್ಕಷ್ಟು ಉಪ್ಪನ್ನು ಹಾಕಿ. ಸ್ವಲ್ಪ ಬಿಸಿಯಾದ ನಂತರ ಉಳಿದ ಪದಾರ್ಥಗಳನ್ನು ಮಿಕ್ಸ್ ಮಾಡಿ. ಇದು ಬೆಂದ ನಂತರ ಕೊತ್ತಂಬರಿ ಸೊಪ್ಪನ್ನು ಉದುರಿಸಿ.