ಬೇಕಾಗುವ ಪದಾರ್ಥಗಳು:
ಪೇಪರ್ ಅವಲಕ್ಕಿ – 1 ಕಪ್, ಬೆಲ್ಲ – 1 ಕಪ್, ಕಾಯಿತುರಿ 1/2 ಕಪ್, ತುಪ್ಪ 2 ಟೇಬಲ್ ಸ್ಪೂನ್, ಏಲಕ್ಕಿ 1/2 ಟೀ ಸ್ಪೂನ್, ಗೋಡಂಬಿ 5 ಮತ್ತು ಬದಾಮ್ 2
ಮಾಡುವ ವಿಧಾನ:
ಪೇಪರ್ ಅವಲಕ್ಕಿಯನ್ನ ಬಾಣಲೆಗೆ ಸುರಿದು ಅದರ ಮೇಲೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿಕೊಂಡು ಸಣ್ಣ ಉರಿಯಲ್ಲಿ ಹುರಿಯಿರಿ. ಅವಲಕ್ಕಿಯ ಬಣ್ಣ ತಿಳಿ ಕಂದು ಬಣ್ಣಕ್ಕೆ ತಿರುಗಿ ಗರಿ ಗರಿಯಾದಾಗ ಉರಿ ಆರಿಸಿ ಪಕ್ಕಕ್ಕಿಡಿ. ಇನ್ನೊಂದು ಪಾತ್ರೆಯಲ್ಲಿ ಬೆಲ್ಲ, ಕಾಯಿತುರಿ ಮತ್ತು ಏಲಕ್ಕಿ ಪುಡಿಯನ್ನ ಹಾಕಿ ಕಾಯಿಸಿ.
ಕಾಯಿ ಬೆಲ್ಲದ ಪಾಕ ತಯಾರಾದ ಮೇಲೆ ಉರಿಯನ್ನ ಆರಿಸಿ. ಅವಲಕ್ಕಿ ಇರುವ ಬಾಣಲೆಯನ್ನ ಸಣ್ಣ ಉರಿಯ ಮೇಲಿಟ್ಟು ತಯಾರಾದ ಬೆಲ್ಲದ ಪಾಕವನ್ನು ಅದಕ್ಕೆ ಸೇರಿಸಿ ಚೆನ್ನಾಗಿ ತಿರುವಿ. ಅವಲಕ್ಕಿಗೆ ಬೆಲ್ಲದ ಪಾಕ ಮೆತ್ತಿಕೊಂಡು ಮಡ್ಡಿಯಂತಾದಾಗ ಉರಿಯನ್ನ ಆರಿಸಿ. ತುಪ್ಪದಲ್ಲಿ ಹುರಿದು ತೆಗೆದ ಗೋಡಂಬಿ ಮತ್ತು ಬದಾಮ್ ತುಣುಕುಗಳನ್ನ ಸೇರಿಸಿ ಸರ್ವ್ ಮಾಡಿದರೆ ಕ್ರಿಸ್ಪಿ ಕ್ರಿಸ್ಪಿ ಅವಲಕ್ಕಿ ಮನೋಹರ ಸವಿಯಲು ಸಿದ್ಧ.
ಅವಲಕ್ಕಿ ಮನೋಹರ ಎಂಬ ಈ ತಿನಿಸು, ಉತ್ತರ ಕನ್ನಡ ಜಿಲ್ಲೆಯ ಮಲೆನಾಡ ಭಾಗದಲ್ಲಿ ನವರಾತ್ರಿಯ ಹಬ್ಬದ ವೇಳೆ ದೇವಿಯ ನೈವೇದ್ಯಕ್ಕಾಗಿ ಮಾಡುತ್ತಾರೆ. ಈ ಮನೋಹರ, ದೇವಿಗೆ ಶ್ರೇಷ್ಠ ಎಂಬ ನಂಬಿಕೆ ಮಲೆನಾಡ ಭಾಗದಲ್ಲಿದೆ.